Uncategorizedಜಿಲ್ಲೆ

ಕತ್ತಲೆಯನ್ನು ದೂರ ಮಾಡಿ, ಪ್ರತಿಯೊಬ್ಬರ ಬದುಕಲ್ಲೂ ಬೆಳಕಿನ ನಗು ಅರಳಲಿ: ಸದಾನಂದ ಡಂಗನವರ ದೀಪಾವಳಿ ಶುಭಾಶಯ

ಹುಬ್ಬಳ್ಳಿ: ದೀಪಾವಳಿ ಕೇವಲ ದೀಪಗಳ ಹಬ್ಬವಲ್ಲ, ಅದು ಪ್ರೀತಿ, ವಿಶ್ವಾಸ, ಭರವಸೆ ಹಾಗೂ ಮಾನವೀಯ ಸಂಬಂಧಗಳನ್ನು ಬೆಸೆಯುವ ಬೆಳಕಿನ ಹಬ್ಬವಾಗಿದೆ. ಪ್ರತಿಯೊಬ್ಬರ ಬದುಕಿನ ಕತ್ತಲೆ ದೂರವಾಗಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷದ ಬೆಳಕು ಮನೆಮಾಡಲಿ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ ಅವರು ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ದೀಪಗಳ ಬೆಳಕು ಪ್ರತಿಯೊಬ್ಬರ ಮನದಲ್ಲೂ ಹೊಸ ಆಶಾಕಿರಣ ಮೂಡಿಸಲಿ. ಬಡವ-ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರ ಮನೆಗಳಲ್ಲೂ ಸಂತೋಷ ನೆಲೆಸಲಿ. ರೈತರು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಪ್ರತಿಯೊಂದು ವರ್ಗದ ಜನರ ಬದುಕಿನಲ್ಲಿ ಹೊಸ ಉತ್ಸಾಹ ಮತ್ತು ಸಮೃದ್ಧಿ ತುಂಬಲಿ. ಕುಟುಂಬಗಳ ನಡುವೆ ಪ್ರೀತಿ, ಸಮಾಜದಲ್ಲಿ ಸೌಹಾರ್ದತೆ ಹಾಗೂ ಎಲ್ಲರ ಹೃದಯಗಳಲ್ಲಿ ಮಾನವೀಯತೆ ಮತ್ತಷ್ಟು ಗಟ್ಟಿಯಾಗಲಿ ಎಂದು ಹಾರೈಸಿದ್ದಾರೆ.

ದ್ವೇಷ, ಅಸೂಯೆ ಮತ್ತು ನೋವುಗಳನ್ನು ಮರೆತು ಪ್ರೀತಿ, ಸಹಬಾಳ್ವೆ ಹಾಗೂ ಸಹೋದರತ್ವದ ದೀಪ ಬೆಳಗಿಸುವ ಮೂಲಕ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸೋಣ. ಈ ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿಗೂ ಹೊಸ ಭರವಸೆ ಮತ್ತು ನೆಮ್ಮದಿಯನ್ನು ತರಲಿ ಎಂದು ಸದಾನಂದ ಡಂಗನವರ ಅವರು ಹಾರೈಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button