ಹುಬ್ಬಳ್ಳಿ: ಈಗಾಗಲೇ ನೇಹಾ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಎಸ್ಪಿ ವೆಂಕಟೇಶ ನೇತೃತ್ವದ ತಂಡ ಸೋಮವಾರ ರಾತ್ರಿ ಹುಬ್ಬಳ್ಳಿಗೆ ಬಂದು ವಾಸ್ತವ್ಯ ಮಾಡಿದೆ. ಈ ನಡುವೆ ಹಳೇಹುಬ್ಬಳ್ಳಿ ಪೋಲಿಸರು ಸಿಐಡಿ ಕ್ರೈಂ ಬ್ರ್ಯಾಂಚ್’ನ ಅಧಿಕಾರಿಗಳು ಎಂದು ಬಂದಿದ್ದ ಮೂವರು ನಕಲಿ ಸಿಐಡಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಹೌದು, ಇತ್ತಿಚೆಗೆ ಹುಬ್ಬಳ್ಳಿ ನಗರದಲ್ಲಿ ಮೂರು ಜನರು ಸಿಐಡಿ ಕ್ರೈಂ ಬ್ರ್ಯಾಂಚ್ ಪೋಲಿಸರು ಎಂದು ಸುಳ್ಳು ಹೇಳಿಕೊಂಡು ಚೈತನ್ಯ ನಗರದ ನಿವಾಸಿ ಯಶೋಧಾ ಮದುಗಲ್ (30) ಎಂಬಾತರೇ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯಿಂದ ಹೆದರಿಸಿ ಹಣ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೋಸ ಹೋದ ಮಹಿಳೆ ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸಿಐಡಿ ಪೋಲಿಸರ ಹೆಸರು ಹೇಳಿಕೊಂಡು ಅರೆಸ್ಟ್ ಆದ ಆರೋಪಿಗಳು
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್ಪೆಕ್ಟರ್ ಎಸ್.ಎಚ್.ಯಳ್ಳೂರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡು ಹಳೇಹುಬ್ಬಳ್ಳಿಯ ಕೃಷ್ಣಾಪೂರ ಓಣಿಯ ನಿವಾಸಿ ಚೇತನ ಹಡಪದ (39), ಲಿಂಗಸೂರನ ಪರಶುರಾಮಗೌಡ ಪಾಟೀಲ್ (45), ಗಂಗಾವತಿಯ ಕಾರಟಗಿಯ ಮಧು ಎಮ್ (35) ಎಂಬ ಮೂರು ನಕಲಿ ಸಿಐಡಿ ಕ್ರೈಂ ಬ್ರ್ಯಾಂಚ್ ಪೋಲಿಸರು ಬಂಧಿಸಿದ್ದಾರೆ. ಇವರಿಂದ ಎರಡು ಮೊಬೈಲ್, ಹಾಗೂ ಒಂದು ಬುಲೆಟ್ ಬೈಕ್’ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಹಳೇಹುಬ್ಬಳ್ಳಿ ಪೋಲಿಸರ ಕಾರ್ಯವನ್ನು ಹು-ಧಾ ಪೋಲಿಸ ಆಯುಕ್ತರು ಶ್ಲಾಘಸಿದ್ದು, ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.