ಹುಬ್ಬಳ್ಳಿ: ಈಗಾಗಲೇ ರಾಜ್ಯಾದ್ಯಂತ ಮನೆ ಮಾತಾಗಿರುವ Monkey 555 ಕಸಬರಗಿಗಳನ್ನೇ ಡುಬ್ಲಿಕೇಟ್ ಮಾಡಿ ಮಾರುಕಟ್ಟೆಗೆ ಬಿಡುವ ಐನಾತಿ ಗ್ಯಾಂಗ್’ವೊಂದು ರಾಜ್ಯದಲ್ಲಿ ಆ್ಯಕ್ಟಿವ್ ಆಗಿದೆ.
ಹೌದು, ಕೇಂದ್ರದ ಸಚಿವರಾಗಿದ್ದ ದಿ.ಅನಂತಕುಮಾರ್ ಅವರ ಸಹೋದರ ನಂದಕುಮಾರ್, ಅಚುತ್ ಲಿಮ್ಹೆ, ಉದಯ ಬಾಡಕ ಸೇರಿದಂತೆ ಕೇಂದ್ರ ಸಚಿವ ಜೋಶಿಯವರ ಪತ್ನಿ ಜ್ಯೋತಿ ಜೋಶಿಯವರ ಪಾಲುದಾರಿಕೆಯ ವಿಭವ ಇಂಡಸ್ಟ್ರಿ ಈ ವೊಂದು Monkey 555 ಕಸಬರಗಿಗಳನ್ನು ತಯಾರಿಸುತ್ತಿದೆ. ಇದಕ್ಕಾಗಿ ಹುಬ್ಬಳ್ಳಿಯ ಹೊರವಲಯದ ಕರಡಿಕೊಪ್ಪ ರಸ್ತೆಯಲ್ಲಿ ಬೃಹತ್ ತಯಾರಿಕಾ ಘಟಕವನ್ನು ಹೊಂದಿದೆ.
ಇಂತಹ ಪ್ರತಿಷ್ಠಿತ ಬ್ರಾಂಡ್ ಹೆಸರಿನ ಕಸಬರಗಿಗಳನ್ನು ಕೆಲವರು ತಾವೇ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.
ಈ ಬಗ್ಗೆ ನಿಮ್ಮ ದಿನವಾಣಿ ಮುಂದಿನ ಸುದ್ದಿಯಲ್ಲಿ ಯಾವೆಲ್ಲ ಜಿಲ್ಲೆಗಳಲ್ಲಿ ಈ ಡುಬ್ಲಿಕೇಟ್ ಕಸಬರಗಿ ತಯಾರಿಸಲಾಗುತ್ತಿದೆ. ಯಾರೆಲ್ಲ ಕೈವಾಡಗಳಿವೆ ಎಂಬ ಇಂಚಿಂಚು ಮಾಹಿತಿಯನ್ನು ಹೊರಹಾಕಲಿದೆ ನಿರೀಕ್ಷಿಸಿ…
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1