ಹುಬ್ಬಳ್ಳಿ ಮೂಲದ ಮಹಿಳೆಗೆ 28 ಬಾರಿ ಮಚ್ಚಿನೆಟು ಕೊಟ್ಟ ಗಂಡ….!
ಅಪೂರ್ವ ಮೇಲೆ ಮಾರಣಾಂತಿಕ ಹಲ್ಲೆ ಸಂಪೂರ್ಣ ವರದಿ ವಿಡಿಯೋ ಸಮೇತ
ಹುಬ್ಬಳ್ಳಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಪತಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಪೋಲಿಸರು ಡಮ್ಮಿ ಕೇಸ್ ಹಾಕಿ ಕೈಬಿಡಬಾರದು, ಹಾಗೇನಾದರೂ ಆದಲ್ಲಿ ಆತನು ಜೈಲಿನಿಂದ ಹೊರಗೆ ಬಂದರೆ ಅವನನ್ನು ಕೊಚ್ಚಿ ಹಾಕ್ತಿವಿ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಅಪೂರ್ವಳ ಆರೋಗ್ಯ ವಿಚಾರಿಸಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಲವ್ ಜಿಹಾದ್ ಪ್ರಕರಣಕ್ಕೆ ಉತ್ತಮ ಉದಾಹರಣೆಯಾಗಿದೆ. ಅಪೂರ್ವ ತನ್ನ ಪ್ರೀಯತಮ ಇಜಾಜ್ ಶಿರೂರನನ್ನು 2018 ರಂದು ಮದುವೆಯಾಗಿದ್ದರೆನ್ನಲಾಗಿದ್ದು, 2 ದಿನಗಳ ಹಿಂದೆ ಗದಗ ಪಟ್ಟಣದಲ್ಲಿ ಮಚ್ಚಿನಿಂದ ಕೊಚ್ಚಿ 23 ಬಾರಿ ಮನಬಂದಂತೆ ಇರಿದಿದ್ದು ಭೀಕರವಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಅಪೂರ್ವ ಎಂಬ ಹೆಣ್ಣು ಮಗಳನ್ನು ಮತಾಂತರ ಮಾಡಿದ್ದಾರೆ. ಅಪೂರ್ವ ಎಂಬ ಹೆಸರನ್ನು ಅರ್ಫಾ ಬಾನು ಎಂದ ಬದಲಿಸಿದ್ದ ಅಲ್ಲದೇ ಇವರ ದಾಂಪತ್ಯದ ಸಾಕ್ಷಿಯಾಗಿ ಮಗು ಕೂಡಾ ಇದೆ. ಈ ಹಿಂದೆ ಆತನಿಗೆ ಮದುವೆಯಾಗಿ ಮೂವರು ಮಕ್ಕಳು ಇದ್ದರೂ ಕೂಡಾ ಅಪೂರ್ವಳನ್ನು ಪ್ರೀತಿಸಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ, ಹಾಗಾಗಿ ಇಜಾಜ್ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬಿಳೋ ಮುಂಚೆ ಅಪೂರ್ವ ಘಟನೆ ನೆನಪಿಸಿಕೊಳ್ಳಬೇಕು. ಅಲ್ಲದೇ ಆ ಮನೆಯನ್ನು ಮೌಲ್ವಿಗಳು ಬಹಿಷ್ಕಾರ ಹಾಕಬೇಕು ಎಂದು ಕಿಡಿಕಾರಿದರು.
ಏನಿದು ಘಟನೆ?:
ಇಜಾಜ್ ಎಂಬ ಆಟೋ ಚಾಲಕನನ್ನು ಪ್ರೀತಿಸಿದ್ದ ಅಪೂರ್ವ 2018 ರಲ್ಲಿ ಮನೆಯಲ್ಲಿ ಗೊತ್ತಾಗದೇ ಮದುವೆ ಆಗುತ್ತಾರೆ.
ಹುಬ್ಬಳ್ಳಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಿ ಮದುವಯಾಗಿದ್ದರು ಎನ್ನಲಾಗಿದ್ದು, ಇಜಾಜ್ ನಿಗೆ ಈ ಮುಂಚೆ ಮದುವೆಯಾಗಿ ಮೂವರು ಮಕ್ಕಳು ಇದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆರು ತಿಂಗಳ ಹಿಂದೆ ವಿಚ್ಚೇದನ ಅರ್ಜಿಯನ್ನು ಅಪೂರ್ವ ಸಲ್ಲಿಸಿದ್ದಳು. ಇಜಾಜ್ ಹಾಗೂ ಅರ್ಫಾ ಬಾನುವಿಗೆ ಪ್ರೀತಿಯ ಫಲವಾಗಿ ಒಂದು ಮಗುವೂ ಇದೆ.
ವಿಚ್ಚೇದನ ಅರ್ಜಿ ಸಲ್ಲಿಸಿದ್ದ ದಿನದಿಂದ ತವರು ಮನೆಯಲ್ಲಿ ಅಪೂರ್ವ ವಾಸವಾಗಿದ್ದಳು. ವಿಚ್ಛೇದನ ಅರ್ಜಿಯಿಂದ ಕುಪಿತಗೊಂಡ ಇಜಾಜ್ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನೆಲಾಗಿದೆ. ಈ ವಿಷಯವನ್ನೆ ಮನಸ್ಸಿನಲ್ಲಿಟ್ಟಿದ್ದ ಇಜಾಜ್ 2 ದಿನಗಳ ಹಿಂದೆ ಗದಗ ನಗರದಲ್ಲಿ ಅಪೂರ್ವ ಸ್ಕೂಟಿ ಕಲಿಯುವ ಸಂದರ್ಭದಲ್ಲಿ ಮಚ್ಚಿನಿಂದ ಕೊಚ್ಚಿ ಮಾರಣಾಂತಿಕವಾಗಿ ಮನಬಂದಂತೆ ಇರಿದಿದ್ದು, ಅಲ್ಲಿ ನೆರದಿದ್ದ ಸಾರ್ವಜನಿಕರು ಕಕ್ಕಾಬಿಕ್ಕಿಗೊಡ ಘಟನೆ ನಡೆಯಿತು. ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಅಪೂರ್ವಳನ್ನು ಸದ್ಯ ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.