
ಹುಬ್ಬಳ್ಳಿ: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಶ್ರೀ ರುದ್ರಮುನಿ ಶಿವಾಚಾರ್ಯ ಹಿರೇಮಠದ ಶಿವಶರಣಿ ಶ್ರೀ ಗದಿಗೆಮ್ಮ ಗಂಗಯ್ಯ ಹಿರೇಮಠ ಅಮ್ಮನವರು ಇಂದು ಲಿಂಗೈಕ್ಯರಾಗಿದ್ದು, ಭಕ್ತ ಸಮುದಾಯದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ಸರಳತೆ, ಧಾರ್ಮಿಕ ನಿಷ್ಠೆ ಹಾಗೂ ಸೇವಾಭಾವದಿಂದ ಗುರುತಿಸಿಕೊಂಡಿದ್ದ ಗದಿಗೆಮ್ಮ ಅಮ್ಮನವರು ಶ್ರೀಮಠದ ಧಾರ್ಮಿಕ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿದ್ದರು. ಮಠದ ಪರಂಪರೆ, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ಸಮಾಜಮುಖಿ ಸೇವೆಗಳನ್ನು ಮುಂದುವರಿಸುವಲ್ಲಿ ಅವರು ಮಹತ್ವದ ಪಾತ್ರವಹಿಸಿದ್ದರು. ಭಕ್ತರೊಂದಿಗೆ ಆತ್ಮೀಯವಾಗಿ ಬೆರೆತು, ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದ ಅವರ ವ್ಯಕ್ತಿತ್ವ ಅನೇಕರಿಗೆ ಪ್ರೇರಣೆಯಾಗಿತ್ತು.
ಅವರ ಜೀವನವು ತ್ಯಾಗ, ಶ್ರದ್ಧೆ ಮತ್ತು ಸೇವೆಯ ಪ್ರತೀಕವಾಗಿದ್ದು, ಮಠದ ಅಭಿವೃದ್ದಿಗೆ ಹಾಗೂ ಭಕ್ತ ಸಮುದಾಯದ ಏಳಿಗೆಗೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಭಕ್ತರು ಕಂಬನಿ ಮಿಡಿದಿದ್ದಾರೆ.
ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ದಿನಾಂಕ 19-05-2026, ಮಂಗಳವಾರ, ಕೊಟಗೊಂಡಹುಣಸಿಯ ರಾಚೋಟೇಶ್ವರ ಮಠದ ಆವರಣದಲ್ಲಿ ಸಮಾಧಿ ವಿಧಿ ನೆರವೇರಿಸಲಾಗುವುದು ಎಂದು ಶ್ರೀಮಠದ ಭಕ್ತರು ತಿಳಿಸಿದ್ದಾರೆ.
ಶಿವಶರಣಿ ಶ್ರೀ ಗದಿಗೆಮ್ಮ ಹಿರೇಮಠ ಅಮ್ಮನವರ ಅಗಲಿಕೆಗೆ ಶ್ರೀಮಠದ ಭಕ್ತವೃಂದ, ಬಂಧುಬಳಗ, ಗ್ರಾಮಸ್ಥರು ಹಾಗೂ ವಿವಿಧ ಗಣ್ಯರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.
“ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ” ಎಂದು ಪ್ರಾರ್ಥಿಸಲಾಗಿದೆ.




