ಗಂಗನಗೌಡ ನರಗುಂದ ಅವರಿಗೆ ‘ಸೇವಾಸ್ಪೂರ್ತಿ’ ರಾಜ್ಯಮಟ್ಟದ ಪ್ರಶಸ್ತಿ

ಹುಬ್ಬಳ್ಳಿ: ಚೇತನ ಫೌಂಡೇಶನ್ ಧಾರವಾಡ ಹಾಗೂ ಪರಿಸರ ಪ್ರೇಮ ತಂಡದ ಸಹಯೋಗದಲ್ಲಿ ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ‘ಸೇವಾಸ್ಪೂರ್ತಿ ರಾಜ್ಯಮಟ್ಟದ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಫೆಬ್ರವರಿ 8ರಂದು ಆಯೋಜಿಸಲಾಗಿದೆ.
ಧಾರವಾಡದ ವಿದ್ಯಾವರ್ಧಕ ಸಂಘದ ನಾಡೋಜ ಪಾಪು ಸಭಾಂಗಣದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಸಮಾಜಸೇವಾ ವಿಭಾಗದಲ್ಲಿ ಕರವೇ ಹುಬ್ಬಳ್ಳಿ ತಾಲೂಕು ಯುವ ಘಟಕದ ಅಧ್ಯಕ್ಷರು ಹಾಗೂ ಅದರಗುಂಚಿ ಗ್ರಾಮದ ನಿವಾಸಿಯಾದ ಗಂಗನಗೌಡ ನರಗುಂದ ಅವರಿಗೆ ಸೇವಾಸ್ಪೂರ್ತಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚೇತನ ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜಮುಖಿ ಚಟುವಟಿಕೆಗಳು, ಸಂಘಟನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಸಲ್ಲಿಸಿರುವ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಶಿಕ್ಷಕರು, ಸಮಾಜಸೇವಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.




