
ಹುಬ್ಬಳ್ಳಿ: ತಾಲೂಕಿನಲ್ಲಿ ಕೊಟಗೊಂಡಹುಣಸಿ ಗ್ರಾಮದ ಬಸವೇಶ್ವರ ದೇವಸ್ಥಾನದ ಹತ್ತಿರ ಅಕ್ಕ ಮಹಾದೇವಿ ವೇದಿಕೆಯನ್ನು (ಕಲ್ಯಾಣ ಮಂಟಪ) ನಿರ್ಮಿಸಿದ್ದು, ಇದರ ಉದ್ಘಾಟನೆ ಸಮಾರಂಭ ಫೆಬ್ರವರಿ 1 ರಂದು ಬೆಳಿಗ್ಗೆ 10 ಗಂಟೆಗೆ ನೇರವೇರಲಿದೆ. ಉದ್ಘಾಟನೆಯನ್ನು ಶಾಸಕ ಎಮ್.ಆರ್.ಪಾಟೀಲ್ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಡಾ.ವೀಣಾ ಸುರೇಶ ಗಾಡಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಧಾರವಾಡದ ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರಾದ ಪ್ರೋ.ಚಂದ್ರಶೇಖರಗೌಡ ಶಿ ಪಾಟೀಲ್ ವಹಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಮುಮ್ಮಿಗಟ್ಟಿಯ ಬಸವಾನಂದ ಸ್ವಾಮಿಗಳು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳನ್ನು ಮಾಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಅದರಲ್ಲೂ ಕಲ್ಯಾಣಮಂಟಪಗಳು ಸಂಪೂರ್ಣವಾಗಿ ವ್ಯಾಪಾರೀಕರಣಗೊಂಡಿವೆ. ಹೀಗಾಗಿ ಬಡವರಿಗೆ ಅನುಕೂಲವಾಗಲೆಂದು ವಿಜಯಪುರದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ಚಂದ್ರಶೇಖರ ಪಾಟೀಲ್ ಸ್ವಂತ ಖರ್ಚಿನಿಂದ ಅಕ್ಕ ಮಹಾದೇವಿ ವೇದಿಕೆ ಹೆಸರಿನಲ್ಲಿ ಕಲ್ಯಾಣಮಂಟಪ ನಿರ್ಮಿಸಿದ್ದಾರೆ.




