ಜಿಲ್ಲೆ

ಮಹಿಳೆಯರು ಸಮಾಜದ ಸ್ವಾಭಿಮಾನದ ಸಂಕೇತ: ಶಾಸಕ ವಿನಯ್ ಕುಲಕರ್ಣಿ!

ಧಾರವಾಡ: ಮಹಿಳೆಯರು ದೇಶ ಹಾಗೂ ಸಮಾಜದ ಸ್ವಾಭಿಮಾನದ ಸಂಕೇತ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು ಎಂದು ಶಾಸಕ ವಿನಯ್ ಕುಲಕರ್ಣಿ ಸಲಹೆ ನೀಡಿದರು.

ಶನಿವಾರ ಸಂಜೆ ” ಕಿತ್ತೂರ ದೊಂಬರಗಿ” ಐಬಿಯಲ್ಲಿ ಧಾರವಾಡ ಮಹಾನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮಾ ಬಲೋಗಿ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಅವರು ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳಿವೆ. ದೇಶ ಆಳುವ ಶಕ್ತಿ ಮಹಿಳೆಗೂ ದೊರಕಿದೆ. ದೇಶದ ರಾಷ್ಟ್ರಪತಿಯೂ ಒಬ್ಬ ಮಹಿಳೆಯೇ ಆಗಿದ್ದಾರೆ. ದೇಶ ರಕ್ಷಣೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲೂ ಮಹಿಳೆಯರ ಪಾಲಿದೆ ಅಲ್ಲದೆ ಕಾಂಗ್ರೆಸ್ ಸರಕಾರ ಬಂದ್ಮೇಲೆ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಸಿಕ್ಕಿದೇ ಶಕ್ತೀ ಯೋಜನೆ ಗೃಹ ಲಕ್ಷ್ಮಿ ಯೋಜನೆ ಇಂತಹ ಯೋಜನೆಯಿಂದಾಗಿ ಮಹಿಳೆಯರು ತಮ್ಮ ಇಷ್ಟಾರ್ಥ ದೇವರು ದರ್ಶನ, ಸಿಟಿಗೆ ಬಂದು ಕೆಲಸ ಸಹ ಮಾಡುತ್ತಿದ್ದಾರೆ, ಆದ್ದರಿಂದ ಸರಕಾರ ಯೋಜನ ಬಹಳ ಸಹಕಾರಿ ಆಗಿದೆ ಎಂದರು.ಇನ್ನೂ ಬಿಜೆಪಿ ಟಿಕೆ ಟಿಪ್ಪಣಿ ಬಗ್ಗೆ ನಮ್ಮ ಸರಕಾರ ತಲೆ ಕೆಡಿಸಿಕೊಳ್ಳುವುದಿಲ್ಲ ತಿಳಿಸಿದರು.

ಬಳಿಕ ಮಾತಾನಾಡಿದ ಗೌರಮ್ಮಾ ಬಲೋಗಿ ಮಹಿಳೆಯರು ರಾಜಕೀಯ, ಶಿಕ್ಷಣ‌ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಬೆಳೆಯಬೇಕು, ಸಮಾಜಕ್ಕೆ ತನ್ನದೆ ಸೇವೆ ಸಲ್ಲಿಸಲು ಮಹಿಳೆಯರು ಮುಂದೆ ಬರಲು ಶಿಕ್ಷಣ ಅಗತ್ಯ ಅದಕ್ಕಾಗಿ ಪಾಲಕರು ತಮ್ಮ ಹೆಣ್ಣು ‌ಮಕ್ಕಳಿಗೆ ಶಿಕ್ಷಣ‌ ನೀಡಬೇಕು ಎಂದು ಸಲಹೆ ನೀಡಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ
ಈಶ್ವರ ಶಿವಳ್ಳಿ, ಪ್ರೀತಿ ಬಿಳ್ಳೇರಿಮಠ, ಸುಶೀಲಾ ಹಿರೇಮಠ, ಮಂಜುಳಾ ತೋಟಗಿ, ನಿಂಗಪ್ಪ ಮೊರಬದ್, ನಿಜಾಮ್ ರಾಯಿ, ಭೀಮಪ್ಪ ಕಸಾಯಿ, ಬಿಮ್ಮಕ್ಕನವರ, ಸರಸ್ವತಿ ಬೆಂಗೇರಿ, ವಿಜಯಲಕ್ಷ್ಮಿ ಅನಾಡ್, ಶಾರದಾ ನಿಗದಿ, ಶಾಂತಾ ಪಾಟೀಲ, ದೀಪಾ ಪಾಟೀಲ, ಕಲ್ಮೇಶ ಮಲ್ಲಿಗ್ವಾಡ್, ಶೋಭಾ ಕರಿಸುಬ್ಬನವರ್, ಮೃತ್ಯುಂಜಯ ಗಣಾಚಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button