ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಇಂದು ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಮುಖಂಡರ ಸಭೆ ನಡೆಸಿ ನೇರವಾಗಿ ಅಲ್ಲಿಯ ಮುಂದಾಳತ್ವ ವಹಿಸಲು ಹೊರಟಿದ್ದ ನಾಯಕರ ಮೇಲೆ ಕೆಂಡಕಾರಿದ್ದಾರಂತೆ. ಈ ಮೂಲಕ ಸೆಂಟ್ರಲ್ ಹಾಗೂ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಹಿಡತ ಸಾಧಿಸಲು ಹಾಳ ಹಾಕಿದ್ದಾರೆಂದು ಹೇಳಲಾಗುತ್ತಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿಂದು ನಡೆದ ಸಭೆಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಸೆಂಟ್ರಲ್ ಕ್ಷೇತ್ರದಲ್ಲಿ ಯಾರು ಸದ್ಯಕ್ಕೆ ನಾಯಕರಿಲ್ಲ. ಡಿ.ಕೆ ಶಿವಕುಮಾರ್ ಹೆಸರು ಹೇಳಿಕೊಂಡು ಕೆಲಸ ಮಾಡುವವರನ್ನು ನಂಬಬೇಡಿ ಎನ್ನುವ ಮೂಲಕ ವಿವಾದದ ಹೇಳಿಕೆ ನೀಡಿ, ಕಿಡಿ ಹೊತ್ತಿಸುವ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ.
ಈ ಸಭೆಯ ಮೂಲಕ ಮುಂದಿನ ದಿನಗಳಲ್ಲಿ ಸೆಂಟ್ರಲ್ ಕ್ಷೇತ್ರದ ಸಾಂಪ್ರದಾಯಕ ಲಾಭಕ್ಕೆ ನಾನು ಮೊದಲಿಗ ಎನ್ನುವ ಸಂದೇಶ ನೀಡಿದ್ದಾರೆಂದು ಬಣ್ಣಿಸಲಾಗುತ್ತಿದೆ. ಈ ಹಿಂದೆ ಅಧಿಕಾರಿಗಳ ವರ್ಗಾವಣೆ ಸಂದರ್ಭದಲ್ಲಿ ಶಾಸಕರು ಹಸ್ತಕ್ಷೇಪ ಮಾಡಿದಾಗ ರಜತ್ ಉಳ್ಳಾಗಡ್ಡಿಮಠ ಹಾಗೂ ದೀಪಕ್ ಚಿಂಚೋರ್ ಆಕ್ರೋಶ ಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಸಮಯದಲ್ಲಿ ಕೆಲವು ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದರು ಎನ್ನುವುದು ಸತ್ಯ.
ಇದೀಗ ಲೋಕಸಭೆ ಚುನಾವಣೆಯ ಸಮೀಪ ಕುರುಡು ಕಾಂಚಾಣದ ಲೆಕ್ಕಾಚಾರ ಶುರುವಾಗುತ್ತಿದ್ದಂತೆ ಇದೀಗ ಪಕ್ಷದ ನಾಯಕರು ಪರಸ್ಪರ ವಿರುದ್ಧದ ಮಾತನಾಡಲು ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಕಂಟ್ರೋಲ್ ಪಡೆಯುವ ಪರ್ವ ಶುರುವಾಗಿದೆ ಎನ್ನಲಾಗುತ್ತಿದೆ.