ಹುಬ್ಬಳ್ಳಿಯಲ್ಲಿ ಹೆಡ್ ಕಾನ್ಸಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ!!
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಹೆಡ್ ಕಾನ್ಸಟೇಬಲ್ ಓರ್ವರು ಅನುಚಿತ ವರ್ತನೆ ತೋರಿರುವ ಘಟನೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಶಬರಿ ನಗರದ ಎಮ್.ಎ.ಖಾದಿರನವರ ಎಂಬಾತನ ವಿರುದ್ದವೇ ಪೋಕ್ಸೋ ಪ್ರಕರಣ ದಾಖಲಾಗಿದ್ದು, ರವಿವಾರ ಮಧ್ಯಾಹ್ನ 9 ವರ್ಷದ ಬಾಲಕಿಯನ್ನು ಪುಸುಲಾಯಿಸಿ ಮನೆಗೆ ಕರೆಸಿ, ಮೂರು ಮಕ್ಕಳ ತಂದೆ ಎಂಬುದನ್ನು ಮರೆತ ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಖದೀಮನವರ ಅನುಚಿತ ವರ್ತನೆ ತೋರಿದ್ದಾನೆ.
ಇದೀಗ ಬಾಲಕಿಯ ಪೊಲೀಸರು ಅನುಚಿತ ವರ್ತನೆ ತೋರಿರುವ ಆರೋಪಿಗೆ ಧರ್ಮಧೇಟು ನೀಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಯನ್ನು ಕೇಶ್ವಾಪುರ ಪೊಲೀಸರಿಗೆ ಒಪ್ಪಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.
ಆರೋಪಿ ವಿರುದ್ಧ ಕಠಿಣ ಕ್ರಮ:
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, ಇಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊರ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.