
> ಕೆಲಸ ಸಹಿಸಲಾಗದ ಕಮಿಷನರ್ ಎತ್ತಂಗಡಿ ಮಾಡಲಾಯಿತೆ..?
> ಕಮಿಷನರ್ ದಿಟ್ಟ ಕ್ರಮಗಳು…
ಅಧಿಕಾರ ವಹಿಕೊಂಡಾಗಿನಿಂದಲೂ ಕಮಿಷನರ್ ಡಾ.ಈಶ್ವರ ಸುಮ್ಮನೇ ಕೂರಲಿಲ್ಲ. ನಗರಾಭಿವೃದ್ಧಿ ಇಲಾಖೆಯ ಆಳ ಅಗಲ ಅನುಭವ ಹೊಂದಿದ್ದ ಅವರು, ನಗರ ಜನತ ಆಶೋತ್ತರಳಿಗೆ ಕಿವಿ ಯಾಗಿದ್ದರು.
ಅವರು ಕೈಗೊಂಡ ಹಲವಾರು ದಿಟ್ಟ ಕ್ರಮಗಳಿಂದ ಪಾಲಿಕೆಯು ಹಿಂದೆಂದಿಗಿಂತಲೂ ಅಭಿವೃದ್ಧಿ ಯತ್ತ ದಾಪುಗಾಲು ಹಾಕುತ್ತಿದೆ.
ನಿರಂತರ ನೀರು ಯೋಜನೆ: ಅವಳಿನಗರದ ಮಹತ್ವಾಕಾಂಕ್ಷೆಯ ನಿರಂತರ ನೀರು ಯೋಜನೆ ಗೆ ತೊಡಕಾಗಿದ್ದ ಭೂ ವಿವಾದ ಬಗೆಹರಿಸಿ ಪೈಪಲೈನ್ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಪರಿಣಾಮ ಶೇ.20 ರಷ್ಟಿದ್ದ ಕಾಮಗಾರಿ ವೇಗ ಹೆಚ್ಚಿಸಿ ಶೇ.50ಕ್ಕೂ ಹೆಚ್ಚು ಪ್ರಗತಿಯಾಗುವಂತೆ ನೋಡಿಕೊಂಡರು. ಪ್ರತಿವಾರ ಬಿಟ್ಟು ಬಿಡದೆ ಪ್ರಗತಿ ಪರಿಶೀಲನೆ ಮಾಡುತ್ತಿದ್ದರು.
ಇದೆಲ್ಲದರ ಪರಿಣಾಮ ಕಾಮಗಾರಿ ಕಲಬುರ್ಗಿ ಹಾಗೂ ಬೆಳಗಾವಿ ನಗರಗಳಿಂದಯೂ ಮುಂದಿದೆ.
100+ ಕೋಟಿ ತೆರಿಗೆ ಸಂಗ್ರಹ: ಆಸ್ತಿ ತೆರಿಗೆ 130 ಕೋಟಿ ರೂ. ಸಂಗ್ರಹಿಸುವಲ್ಲಿ ಕೈಗೊಂಡ ಕ್ರಮಗಳು ಫಲನೀಡಿದವು.
400+ ಕೋಟಿ ಸಂಗ್ರಹಣೆಗೆ ಚಾಲನೆ: ಪಾಲಿಕೆಯ ಆದಾಯ ಮೂರುಪಟ್ಟು ಅಂದಾಜು 400-450 ಕೋಟಿ ರೂಪಾಯಿಗಳಿಗೆ
ಹೆಚ್ಚಿಸಲು ದಿಟ್ಟ ಹೆಜ್ಜೆ ಇಟ್ಟು ಬಹುವಷಗಳಿಂದ ನನೆಗುದಿಗೆ ಬಿದ್ದಿದ್ದ ಆಸ್ತಿಗಳ ಭೌಗೋಳಿಕ ಸಮೀಕ್ಷೆ ವ್ಯವಸ್ಥೆಯನ್ನು (ಜಿಐಎಸ್) ಜಾರಿಗೊಳಿಸಲು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದು ಸಾಮಾನ್ಯ ಸಾಧನೆಯಲ್ಲ. ಇದು ಡಾ.ಈಶ್ವರ ಅವರ ಕಾರ್ಯಕ್ಷಮತೆಗೆ ಕೈಗನ್ನಡಿ.
ಎಲ್ ಇಡಿ ಕಗ್ಗಂಟು ಬಿಡಿಸಿದರು…
ಮತ್ತೊಂದು ಮಹತ್ವದ ಕೆಲಸ ಅವಳಿನಗರ ಸೌಂದರ್ಯ ಮತ್ತು ಸುರಕ್ಷಿತ ಕ್ರಮವಾಗಿ ಅಂದಾಜು 90 ಕೋಟಿ ರೂಪಾಯಿಗಳಿಗೂ ಅಧಿಕ ವೆಚ್ಚದ ಎಲ್ ಇಡಿ ಬೀದಿ ದೀಪ ಯೋಜನೆ.
ಇದು ಟೆಂಡರ್ ಅಂತಿಮ ಹಂಯದಲ್ಲಿದೆ.
ಕಮಿಷನರ್ ಅವರ ಕಠಿಣ ನಿಲುವುಗಳಿಂದಾಗಿ ಪಾಲಿಕೆಗೆ ಆರ್ಥಿಕ ಉಳಿತಾಯ ತಂದುಕೊಡಲಿದೆ. ಇದರೊಂದಿಗೆ ಜನರ ಬಹು ವರ್ಷಗಳ ಬೇಡಿಕೆ ಈಡೇರಲಿದೆ.
ಇ-ಸ್ವತ್ತು ಸರಳೀಕರಣ
ಡಾ. ಈಶ್ವರ ಅವರ ಮಹತ್ವಾಕಾಂಕ್ಷೆ ಇ-ಸ್ವತ್ತು ಮೇಳ. ನಾಗರೀಕರಿಗೆ ತೀವ್ರ ತೊಂದರೆಯಾಗಿದ್ದ ಇ-ಸ್ವತ್ತು ಸರ್ಟಿಫಿಕೇಟ್ ಪಡೆಯುವುದನ್ನು ವಲಯ ಹಾಗೂ ವಾರ್ಡವಾರು ವಿಸ್ತರಿಸಲು ಇ-ಸ್ವತ್ತು ಮೇಳ ಆರಂಭಿಸಿದರು. ಈ ಮೂಲಕ ಮನೆ ಬಾಗಿಲಿಗೆ ಪಾಲಿಕೆ ಎನ್ನುವಂತೆ ಆಯಿತು. ಪ್ರತಿ ತಿಂಗಳು ಮೊದಲ ಹಾಗೂಈರನೇ ಶನಿವಾರದಂದು ಇ-ಸ್ವತ್ತು ಮೇಳ ನಡೆಯಬೇಕು. ಹೊಸ ಕಮಿಷನರ್ ಮುಂದುವರಿಸುತ್ತಾರೆ ನೋಡಬೇಕು.
ಅವಳಿ ನಗರವನ್ನು ಹಸಿರುಕರಣ ಮಾಡಲು ಬದ್ದವಾಗಿದ್ದು, ಒಂದು ಲಕ್ಷ ಗಿಡಗಳನ್ನು ನೆಡಲು ಯೋಜನೆಗೆ ಚಾಲನೆ ನೀಡಿದ್ದರು.
ಬಹುವರ್ಷಗಳಿಂದ ಬಾಕಿ ಉಳಿದಿದ್ದ ಕೈಗಾರಿಕೆ ವಸಾಹತು ಹಾಗೂ ಕೆಎಚ್ ಬಿ ಮತ್ತು ಖಾಸಗಿ ಲೇಔಟ್ ಗಳ ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದರು.