Uncategorizedಜಿಲ್ಲೆದೇಶರಾಜಕೀಯರಾಜ್ಯಸಂಸ್ಕೃತಿ

ಯುಗಾದಿಯನ್ನು ಧಾರ್ಮಿಕ ದಿನವನ್ನಾಗಿಸಲು ಸರ್ಕಾರದಿಂದ ಸೂಚನೆ…!

ಬೆಂಗಳೂರು: ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಇಂತಹ ಮೊದಲ ಯುಗದ ಆರಂಭದ ದಿನವೇ ಯುಗಾದಿ. ವೇದಗಳ ಪ್ರಕಾರ ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬವು ಹಲವು ಮಹತ್ತರಗಳಿಗೆ ಸಾಕ್ಷಿಯಾಗಿದೆ. ಇಂತಹ ಹಬ್ಬವನ್ನು ಇದೀಗ ಸರ್ಕಾರ ಧಾರ್ಮಿಕ ದಿನವನ್ನಾಗಿ ಆಚರಿಸಲು ಸೂಚನೆ ನೀಡಿದೆ.

ಹೌದು, ಈಗಾಗಲೇ ಈ ಕುರಿತು ಸೂಚನೆ ಹೊರಡಿಸಿರುವ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಸುತ್ತೋಲೆ ಹೊರಡಿಸುವಂತೆ ತಿಳಿಸಿದ್ದಾರೆ. ಚಾಂದ್ರಮಾನ ಮತ್ತು ಸೌರಮಾನ ಯುಗಾದಿಯ ದಿನಗಳಂದು ಇಲಾಖಾ ವ್ಯಾಪ್ತಿಯ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಧಾರ್ಮಿಕ ದಿನಾಚರಣೆ ಆಚರಿಸುವಂತೆ ತಿಳಿಸಿದ್ದು, ಅಂದು ದೇವಾಲಯಗಳಲ್ಲಿ ಪಂಚಾಂಗ ಶ್ರವಣ, ಹರಿಕಥೆ, ವಿಶೇಷ ಪೂಜೆ, ಭಜನೆ, ಹರಿಕಥೆ, ಪ್ರಸಾದ ವಿತರಣೆ ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಧಾರ್ಮಿಕ ದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸೂಚನೆ ನೀಡಿದ್ದಾರೆ.

ಇದಲ್ಲದೇ ಸೂಕ್ತ ಸುತ್ತೋಲೆ ಹೊರಡಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಸಚಿವೆ ಸೂಚನೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಇದೇ ಸಂದರ್ಭದಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆಗಳನ್ನು ರಾಜ್ಯದ ದೇವಾಲಯಗಳಲ್ಲಿ ಕೈಗೊಳ್ಳಲು‌ ಕೂಡಾ ಸೂಚನೆ ನೀಡಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button