ಹುಬ್ಬಳ್ಳಿ: ಆಸ್ಪತ್ರೆಯಲ್ಲಿ ರೋಗಿಗಳಿರುತ್ತಾರೆ. ಅವರಿಗೆ ತೊಂದರೆ ಆಗುತ್ತದೆ. ಹೀಗಾಗಿ ಆಸ್ಪತ್ರೆ ಅಂದರೆ ಸೈಲಂಟ್ ಆಗಿ ಇರಬೇಕು ಎಂದು ಹೇಳುವುದು, ಮತ್ತು ಹೇಳುವುದನ್ನು ನಾವು ನೋಡಿದ್ದೇವೆ. ಆದರೆ ಅದೇ ರೋಗಿಗಳ ಹಾರೈಕೆ ಮಾಡುವ ವೈದ್ಯಕೀಯ ಸಿಬ್ಬಂದಿ/ವಿದ್ಯಾರ್ಥಿಗಳು ರೋಗಿಗಳ ಆರೋಗ್ಯಕ್ಕೆ ಹಾನಿಯಾಗುವ ರೀತಿಯಲ್ಲಿ ಡಿಜೆ ಹಚ್ಚಿ, ಕುಣಿದು ಕುಪ್ಪಳಿಸಿದರೇ ಹೇಗೆ? ಹೌದಲ್ವಾ ಇಂತಹದೊಂದು ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಕಿಮ್ಸ್ ಆಡಳಿತ ಭವನದ ಹತ್ತಿರದ ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುತ್ತಿರುವ ವಿದ್ಯಾರ್ಥಿಗಳು
ಈಗಾಗಲೇ ಹುಬ್ಬಳ್ಳಿಯ ಕಿಮ್ಸ್ ಉತ್ತರ ಕರ್ನಾಟಕ ಭಾಗದ ಸಂಜೀವಿನಿ ಎಂದು ಕರೆಸಿಕೊಳ್ಳುತ್ತದೆ. ಪ್ರತಿನಿತ್ಯ ಇಲ್ಲಿ, ಸಾವಿರಾರು ರೋಗಿಗಳು ಬರುತ್ತಾರೆ. ಚಿಕಿತ್ಸೆ ಪಡೆಯುತ್ತಾರೆ. ಹೀಗಿರುವಾಗ ಇಂತಹ ಪ್ರತಿಷ್ಠಿತ ಆಸ್ಪತ್ರೆ ಆವರಣದಲ್ಲಿ ಜವಾಬ್ದಾರಿಯುತ ವೈದ್ಯಕೀಯ ಸಿಬ್ಬಂದಿಗಳು /ವಿದ್ಯಾರ್ಥಿಗಳೇ ಜವಾಬ್ದಾರಿ ಮರೆತು ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿದ್ದಾರೆ.
ಇದೀಗ ಈ ವೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಹಾಡುತ್ತಿದ್ದು, ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಇನ್ನು ಈ ಘಟನಾ ಸಂಬಂಧ ಹೊಣೆಯನ್ನು ಯಾರು ಹೊತ್ತಿ ಕೊಳ್ಳುತ್ತಾರೆ? ಕಿಮ್ಸ್ ನಿರ್ದೇಶಕರು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.