ಹುಬ್ಬಳ್ಳಿ: ಆಧುನಿಕ ದಿನಮಾನಗಳಲ್ಲಿ ರಕ್ತಕ್ಕೆ ಬಹುಬೇಡಿಕೆಯಿದ್ದು, ರಕ್ತದಾನಿಗಳ ಅವಶ್ಯಕತೆಯೂ ಹೆಚ್ಚಿದೆ. ಈ ದಿಸೆಯಲ್ಲಿ ಸಿಂಗಲ್ ಡೋನರ್ ಪ್ಲೇಟ್ಲೇಸ್ ಹಾಗೂ ರ್ಯಾಂಡಂ ಡೋನರ್ ಪ್ಲೇಟ್ಲೇಸ್ ಇನ್ ಪ್ಲೇಟ್ಲೇಸ್ ಟ್ರಾನ್ಸಫ್ಯೂಜನ್, ಪ್ರಿ ಸ್ಟೋರೇಜ್ ಹಾಗೂ ಪೋಸ್ಟ್ ಸ್ಟೋರೇಜ್ ಲ್ಯೂಕೋರೆಡಕ್ಷನ್ ವಿಷಯವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಇಲ್ಲಿನ ಗೋಕುಲರಸ್ತೆಯ ಫರ್ಲ್ ಹೊಟೆಲ್’ನಲ್ಲಿ ಧಾರವಾಡ ಜಿಲ್ಲಾ ಡ್ರಗ್ಸ್ ಕಂಟ್ರೋಲರ್ ಇಲಾಖೆ, ಧಾರವಾಡ ಜಿಲ್ಲಾ ರಕ್ತ ಸುರಕ್ಷತೆ ಮತ್ತು ಡಿಎಪಿಸಿಯು, ಹುಬ್ಬಳ್ಳಿಯ ಕಿಮ್ಸ್ ರಕ್ತ ಕೇಂದ್ರ, ಪ್ರೇಮ ಬಿಂದು ರಕ್ತ ಕೇಂದ್ರ, ಸುವರ್ಣ ಕರ್ನಾಟಕ ರಕ್ತ ಕೇಂದ್ರಗಳ ಸಂಯುಕ್ತಶ್ರಯದಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೈದ್ಯರಿಗಾಗಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕುರಿತು ಉಪನ್ಯಾಸ ಜರುಗಿತು.
ಈ ವೇಳೆ ಪ್ರೋ ಡಾ.ಶಿವರಾಮ ಅವರು ಪ್ಲೇಟ್‌ಲೆಟ್ ವರ್ಗಾವಣೆಯಲ್ಲಿ ಏಕ ದಾನಿ ಪ್ಲೇಟ್‌ಲೆಟ್‌ಗಳು ಮತ್ತು ಯಾದೃಚ್ಛಿಕ ದಾನಿ ಪ್ಲೇಟ್‌ಲೆಟ್‌ಗಳು ಹಾಗೂ ಪ್ರಿ ಸ್ಟೋರೇಜ್ ಮತ್ತು ಪೋಸ್ಟ್ ಎ ಸ್ಟೋರೇಜ್ ಲ್ಯುಕೋರೆಡಕ್ಷನ್ ಕುರಿತು ಉಪನ್ಯಾಸ ನೀಡಿದರು.
ಇದಕ್ಕೂ ಪೂರ್ವದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಡ್ರಗ್ ಕಂಟ್ರೋಲ್ ಡಿ.ಸಿ ಡಾ.ಭಾಗೋಜಿ ಖಾನಾಪುರೆ, ಕಿಮ್ಸ್ ನಿರ್ದೇಶಕ ಡಾ.ಎಸ್.ಎಸ್.ಕಮ್ಮಾರ ಮಾತನಾಡಿದರು.
ಬಳಿಕ ನಿರಂತರವಾಗಿ ರಕ್ತದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1