
ಹುಬ್ಬಳ್ಳಿ: ಬೈಕ್ ಹಾಗೂ ಟಾಟಾ ಇಂಟ್ರಾ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರನೊರ್ವನಿಗೆ ಗಾಯಗಳಾದ ಘಟನೆ ಗಬ್ಬೂರು ಹೊರವಲಯದ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಘಟನೆಯಲ್ಲಿ ಅರಳಿಕಟ್ಟಿ ಗ್ರಾಮದ ಕಾರ್ತಿಕ ಬೆನ್ನಿ ಎಂಬಾತನಿಗೆ ಗಾಯಗಳಾಗಿದ್ದು, ಗಬ್ಬೂರ ಕಡೆಯಿಂದ ಕುಂದಗೋಳ ಕ್ರಾಸ್ ಕಡೆಗೆ ಹೊರಟ್ಟಿದ್ದ ಬೈಕ್ ಸವಾರ ಕುಂದಗೋಳ ಕ್ರಾಸ್ ಕಡೆಯಿಂದ ಗಬ್ಬೂರ ಕಡೆಗೆ ಎದುರಿಗೆ ಬರುತ್ತಿದ್ದ ಟಾಟಾ ಇಂಟ್ರಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಬೈಕ್ ಸಂಪೂರ್ಣವಾಗಿ ಸಜ್ಜುನುಜ್ಜಾಗಿದ್ದು, ಟಾಟಾ ಇಂಟ್ರಾ ವಾಹನದ ಮುಂಭಾಗ ಕೂಡಾ ಜಖಂಗೊಂಡಿದೆ.
ಇನ್ನು ಅಪಘಾತದ ಕುರಿತು ಟಾಟಾ ಇಂಟ್ರಾ ವಾಹನದ ಚಾಲಕ ಹೇಳಿದ್ದು ಹೀಗೆ….
Video Player
00:00
00:00
ಈ ಘಟನೆ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1