Uncategorizedಅಪರಾಧಜಿಲ್ಲೆ
ರಸ್ತೆ ಅಪಘಾತ: ಚಿಕ್ಕನರ್ತಿಯ ಕಲ್ಲನಗೌಡ ಪಾಟೀಲ್ ಸ್ಥಳದಲ್ಲಿಯೇ ಸಾವು
ಕುಂದಗೋಳ: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ಕುಂದಗೋಳ ತಾಲೂಕಿನ ಯರಗುಪ್ಪಿ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿ ತಾಲೂಕಿನ ಚಿಕ್ಕನರ್ತಿ ಗ್ರಾಮದ ಕಲ್ಲನಗೌಡ ಪಾಟೀಲ್ (48) ಎಂದು ಗುರುತಿಸಲಾಗಿದೆ. ಈತ ಎಂದಿನಂತೆ ಕೆಲಸ ಮುಗಿಸಿ ಮಂಗಳವಾರ ರಾತ್ರಿ ತಮ್ಮೂರು ಚಿಕ್ಕನರ್ತಿ ಗ್ರಾಮಕ್ಕೆ ಬೈಕ್ ಮೂಲಕ ಮರಳುತ್ತಿರುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಪಡಿಸಿದೆ. ಪರಿಣಾಮ ಕಲ್ಲನಗೌಡ ಪಾಟೀಲ್ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಂದಗೋಳ ಪೋಲಿಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1