ಶಿಗ್ಗಾಂವಿ: ಧಾರವಾಡ ಸಂಸದರು ಖರ್ಚು ಮಾಡುವಷ್ಟು ಹಣ ನನ್ನ ಬಳಿ ಇಲ್ಲ, ಆದರೆ ನಿಮ್ಮ ಮತ ಶಕ್ತಿ ಮುಂದೆ ಅವರ ಹಣದ ಶಕ್ತಿ ನಡೆಯೋದಿಲ್ಲ ಎಂದು ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಶಿಗ್ಗಾಂವಿಯಲ್ಲಿ ಭಕ್ತರ ಸಭೆಯಲ್ಲಿ ಶಿರಹಟ್ಟಿ ಫಕೀರ್ ದಿಂಗಾಲೇಶ್ವರ ಶ್ರೀಗಳು ಮಾತನಾಡುತ್ತಿರುವ ದೃಶ್ಯ
ಶಿಗ್ಗಾಂವಿ ಪಟ್ಟಣದ ವಿರಕ್ತಮಠದ ಸಭಾಭವನದಲ್ಲಿ ಭಕ್ತರ ಸಭೆಯನ್ನು ನಡೆಸಿ ಮಾತನಾಡಿದ ಆವರು, ಕಲುಷಿತ ರಾಜಕೀಯ ಶುದ್ದೀಕರಣ ನಮ್ಮಿಂದಾಗಲಿ ಎಂದು ನಾಡಿನ ಮಠಾಧೀಶರು ಸಲಹೆ ನೀಡಿದ್ದಾರೆ. ಅವರ ಸಹಕಾರದಿಂದ ರಾಜಕೀಯ ಅಖಾಡಕ್ಕೆ ಧುಮುಕಿದ್ದೇನೆ. ಮತದಾರರು ಮನಸು ಮಾಡಿದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದರು.
ನಿಮ್ಮ ಮತ ನನಗೆ ದಾನವಾಗಿ ನೀಡಿ, ಆದರೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ನನ್ನ ಗೆಲ್ಲಿಸಿ ಎಂದರು.
ಹೆತ್ತ ತಾಯಿ, ಉಣ್ಣುವ ಅನ್ನದ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಲಿಂಗಾತರಿಗೆ ಮೋಸವಾಗಿದೆ. ಆದರೆ ನಾನು ಜಾತ್ಯಾತೀತವಾಗಿ ಸರ್ವ ಧರ್ಮದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುವೆ. ನಿಮ್ಮ ಮತದಿಂದ ಗೆದ್ದು ದೇಶಕ್ಕೆ ಆದರ್ಶ ಸಂಸದನಾಗಿ ನಿಮ್ಮ ಕೆಲಸ ಮಾಡುತ್ತೇನೆ. ತಪ್ಪಾಗುವ ಮೊದಲೇ ಜನರನ್ನು ಜಾಗೃತಿಗೊಳಿಸಿ.
– ಫಕೀರ್ ದಿಂಗಾಲೇಶ್ವರ ಶ್ರೀಗಳು.