ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್’ಗಳಲ್ಲಿ ಪರಿಶೀಲನೆ ವೇಳೆ ನಗದು ಸೇರಿದಂತೆ 1.23 ಕೋಟಿ ರೂ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜೆ.ಆರ್.ಜೆ ಹೇಳಿದರು.
ನಗರದಲ್ಲಿಂದು ಪಾಲಿಕೆ ಆವರಣದ ಸಭಾ ಭವನದಲ್ಲಿ ಲೋಕಸಭಾ ಸಾರ್ವಜನಿಕ ಚುನಾವಣೆ ಹಿನ್ನೆಲೆಯಲ್ಲಿ MCMC ಮತ್ತು ಕಾಸಿಗಾಗಿ ಸುದ್ದಿ ಕುರಿತು ಪತ್ರಕರ್ತರಿಗೆ ಮಾಧ್ಯಮ ಕಾರ್ಯಗಾರ ನಡೆಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 38.50 ಲಕ್ಷ ಮೌಲ್ಯದ ಬಂಗಾರ, 18.71 ಲಕ್ಷ ರೂ ಮೌಲ್ಯದ ನಗದು, 28.29 ಲಕ್ಷ ಮೌಲ್ಯದ ಮದ್ಯ, 2000 ಸೀರೆ, 1342 ಜೀನ್ಸ್ ಫ್ಯಾಂಟ್’ಗಳನ್ನು ವಶಪಡಿಸಿಕೊಳ್ಳಾಗಿದೆ. ಈ ಸಂಬಂಧ ಪೋಲಿಸ ಇಲಾಖೆಯಿಂದ 48, ಎಸ್ ಎಸ್ ಟಿದಿಂದ 10, ವಿಎಸ್ಟಿ 1 ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಯಾವುದೇ ಹಣವನ್ನು ಸಾಗಿಸುವ ವೇಳೆ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ದಾಖಲೆಗಳಿಲ್ಲದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗುವುದು, ಬಳಿಕ ದಾಖಲೆ ಸಲ್ಲಿಸಿದಾಗ ಹಣವನ್ನು ವಾಪಾಸ್ ನೀಡಲಾಗುವುದು, ಈ ರೀತಿ 4.50 ಲಕ್ಷ ರೂ ಹಣವನ್ನು ವಾಪಾಸ್ ಮರಳಿಸಿದ್ದೇವೆ ಎಂದು ತಿಳಿಸಿದರು.