Top NewsUncategorizedಆರೋಗ್ಯಜಿಲ್ಲೆ
ವಿಶ್ವ ಹೃದಯ ದಿನ ನಿಮಿತ್ತ ಜಾಗೃತಿ ಕಾರ್ಯಕ್ರಮ…!
ಹುಬ್ಬಳ್ಳಿ: ವಿಶ್ವ ಹೃದಯ ದಿನ ಅಂಗವಾಗಿ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರದ ಶ್ರೀ ಬಾಲಾಜಿ ಹಾರ್ಟ್ ಸೆಂಟರ್ ವತಿಯಿಂದ ಸೆ.29ರ ಗುರುವಾರದಂದು ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ಹೃದಯ ರೋಗ ತಪಾಸಣೆ ಹಾಗೂ ಹೃದ್ರೋಗ ಸಮಸ್ಯೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ 40 ವರ್ಷದೊಳಗಿನ ಮಧ್ಯ ವಯಸ್ಕರಲ್ಲಿ ಹಾಗೂ ಯುವಕರಲ್ಲಿಯೇ ಹೃದಯಾಘಾತ ಸಮಸ್ಯೆಯು ಹೆಚ್ಚಾಗಿ ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಹೃದ್ರೋಗದ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೃದ್ರೋಗ ತಜ್ಞರಾದ ಡಾ. ನಿತಿನ್ ಕಡಕೋಳ, ಡಾ. ಸುರೇಶ. ಎಚ್., ಕಾರ್ಯಕ್ರಮ ನಡೆಸಿಕೊಡಲಿದ್ದು, ಬಾಲಾಜಿ ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1