Top NewsUncategorizedಅಪರಾಧಜಿಲ್ಲೆವಿಡಿಯೋ
Trending

ಕುಡಿದು ಪೊಲೀಸ್ ವಾಹನ ಆ್ಯಕ್ಸಿಡೆಂಟ್ ಮಾಡಿದ್ದ ಪೊಲೀಸ್ ಆಫೀಸರ್ ಸಸ್ಪೆಂಡ್..!

ಹುಬ್ಬಳ್ಳಿ: ಹೋಳಿ ಹಬ್ಬದ ದಿನದಂದು ಕುಡಿದ ಮತ್ತಿನಲ್ಲಿ ಪೋಲಿಸ್ ಪೆಟ್ರೋಲಿಂಗ್ ವಾಹನವನ್ನು ಚಾಲನೆ ಮಾಡುವಾಗ ರಸ್ತೆಯ ಸೇಫ್ಟಿ ಬ್ಯಾರಿಯರ್ ಗೆ ಗುದ್ದಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ಇಬ್ಬರು ಪೋಲಿಸರನ್ನು ಹು-ಧಾ ಪೋಲಿಸ್ ಆಯುಕ್ತ ಲಾಬೂರಾಮ್ ಅಮಾನತು ಮಾಡಿದ್ದಾರೆ.

ಉತ್ತರ ಸಂಚಾರಿ ಠಾಣೆಯ ಎಎಸ್ ಐ ಉದಯ ದೊಡ್ಡಮನಿ ಹಾಗೂ ಸಶಸ್ತ್ರ ಮೀಸಲು ಪಡೆಯ ಮುತ್ತು ಮಾಗಿ ಅಮಾನತು ಆದ ಸಿಬ್ಬಂದಿಗಳಾಗಿದ್ದು, ಹೋಳಿ ನಿಮಿತ್ತವಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವಾಣಿಜ್ಯ ನಗರಿಯಲ್ಲಿ ಪೋಲಿಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಆ ದಿನ ಕರ್ತವ್ಯ ನಿರ್ವಹಿಸಿ ಮುತ್ತು ಮಾಗಿ, ಉದಯ ದೊಡ್ಡಮನಿ ಹೈವೇ ಪೆಟ್ರೋಲಿಂಗ್ ವಾಹನವನ್ನು ತೆಗೆದುಕೊಂಡು ನಗರದ ಹೊರವಲಯದಲ್ಲಿ ತೆರಳಿದರು. ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ತಾರಿಹಾಳ ಬಳಿ ರಸ್ತೆಯ ಸೇಪ್ಟಿ ಬ್ಯಾರಿಯರ್ ಗೆ ಡಿಕ್ಕಿಯಾಗಿತ್ತು. ಪರಿಣಾಮ ವಾಹನ ಚಾಲನೆ ಮಾಡುತ್ತಿದ್ದ ಮುತ್ತು ಮಾಗಿ ಎಂಬುವವರಿಗೆ ಗಂಭೀರಗಾಯಗಳಾಗಿದ್ದವು‌. ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸ್ ಆಯುಕ್ತರು ಸತ್ಯಾಸತ್ಯತೆ ಪರೀಕ್ಷಿಸಿ ಕರ್ತವ್ಯ ಲೋಪ ಎಸಗಿದ ಪೋಲಿಸ್ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button