ಜಿಲ್ಲೆ
ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳ ಡಿಕ್ಕಿ – ಪ್ರಾಣಾಪಾಯ ತಪ್ಪಿದ ಅದೃಷ್ಟ
- : ಹುಬ್ಬಳ್ಳಿ
ಹುಬ್ಬಳ್ಳಿ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೊಲ್ವಿ ಕ್ರಾಸ್ ಹತ್ತಿರ ಸಾಯಂಕಾಲ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿ, ವಾಹನ ಸಂಚಾರಕ್ಕೆ ಅಲ್ಪ ಸಮಯ ತೊಂದರೆ ಉಂಟಾಯಿತು.
ಮಾಹಿತಿ ಪ್ರಕಾರ, ಒಂದು ಕಾರಿನ ಚಾಲಕ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಬಳಿಕ ಬುದ್ಧಿ ತಡೆಗೋಡೆಯನ್ನು ಪಾರು ಮಾಡಿ ಮತ್ತೊಂದು ಬದಿಗೆ ತಿರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೆ, ಇಬ್ಬರೂ ಕಾರು ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿದರೆ, ಕೆಲ ಸಮಯದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ದೊಡ್ಡ ದುರಂತ ತಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗ ಬೇಕಾಗಿದೆ
ವರದಿ ಶಶಿಕಾಂತ ಕೊರವರ್
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




