Top NewsUncategorizedಸಂಸ್ಕೃತಿ
Trending

ಸಾಕ್ಷಾತ್ ಶಿವನ ಅವತಾರಿ ಅಜ್ಜನ ದರ್ಶನಾರ್ಶೀವಾದ ಪಡೆದು ಪುನೀತರಾಗಿ: ಡಾ.ಶರಣಪ್ಪ ಕೊಟಗಿ

ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ಮೂರು ಶಬ್ಧವೇ ದೊಡ್ಡ ಅರ್ಥ ಕೊಡುತ್ತದೆ. ಲಕ್ಷ ಲಕ್ಷ ಭಕ್ತ ಸಮೂಹವು ಶ್ರೀ ಸಿದ್ದಾರೂಢಮಠದಲ್ಲಿ ಸೇರುವಂತೆ ಮಾಡುತ್ತಿದೆ. ಈ ಜಾತ್ರೆ ಜಾತಿ, ಮತ, ಧರ್ಮ, ಭಾಷೆ ಮೀರಿದ ಯಾತ್ರೆಯಾಗಿದೆ. ಇದೆಲ್ಲದಕ್ಕೂ ಕಾರಣನೇ ಆ ಸದ್ಗುರು ಸಿದ್ದಾರೂಢ ಹಾಗೂ ಗುರುನಾಥರೂಢರು ಎಂದು ಕೆಪಿಸಿಸಿ ಸಂಯೋಜಕರು, ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್ ನ ಕಾರ್ಯದರ್ಶಿಗಳು ಹಾಗೂ ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ಶರಣಪ್ಪ ಎಂ ಕೊಟಗಿ ಹೇಳಿದರು.

ಶ್ರೀ ಸಿದ್ಧಾರೂಢಾಯ ನಮಃ

 

ನಗರದ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದಾರೂಢ ಸ್ವಾಮಿಯವರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತ ಸಮೂಹವನ್ನು ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.

ಶ್ರೀ ಗುರುನಾಥಾರೂಢಾಯ ನಮಃ

 

ಅಜ್ಜನ ಜಾತ್ರೆಗೆ ಬನ್ನಿ ಎನ್ನುವ ಪದವೇ ನೀವೆಲ್ಲರೂ ಇಲ್ಲಿ ಕೂಡುವಂತೆ ಮಾಡಿದೆ. ಜಾತ್ರೆಯಲ್ಲಿ ಹಲವು ಧರ್ಮ, ಪಂಥ, ಭಾಷೆಯ ಸಮುದಾಯವಿದೆ. ಇಷ್ಟೆಲ್ಲ ಜನ ಸೇರಲು ಸೂತ್ರಧಾರನೇ ಆ ಸಿದ್ದಾರೂಢರು. ಇಲ್ಲಿ ತಲೆಗಳು ಬೇರೆ ಬೇರೆಯಾದ್ರೂ ವಿಭೂತಿ ರುದ್ರಾಕ್ಷಿ ಸೂತ್ರಧಾರ ಆ ಗದ್ದುಗೆಯ ಸಿದ್ದಾರೂಢ ಹಾಗೂ ಗುರುನಾಥರೂಢರು ಎಂದಿದ್ದಾರೆ.

ಸಾಕ್ಷಾತ್ ಬ್ರಹ್ಮವೇ , ಗುರು ವೇಶದಲ್ಲಿ ಈ ಭರತ ಭೂಮಿಯನ್ನು ಸಂಚರಿಸಿ, ಅನೇಕ ಮುಮುಕ್ಷು ಗಳನ್ನು ಉದ್ಧರಿಸಿ.. ಸಂಶಯಾತ್ಮಕ ವಿಷಯಗಳನೆಲ್ಲ ,ಅತಿ ಸರಳ ರೀತಿಯಲ್ಲಿ ಉಣಬಡಿಸಿದ ,ಸದ್ಗುರು ದಯಾನಿಧಿ…ಹಾಗೂ ಪ್ರಾಪಂಚಿಕ ಜನರ ಉದ್ದಾರ ಕ್ಕೋಸ್ಕರ ಅನೇಕ ಉತ್ಸವಗಳನ್ನು (ರಥೋತ್ಸವ, ಜಲ ರಥೋತ್ಸವ ಮುಂತಾದವುಗಳು) ಮಾಡಿ ,ಈ ಲೌಕಿಕ ಜನರನ್ನು ಮೋಕ್ಷಕ್ಕೆ ಹಚ್ಚುವ ಸಾಧನ ಎಂದು ತಿಳಿದು , ಓಂ ನಮಃ ಶಿವಾಯ ಮಂತ್ರವನ್ನು ಉಪದೇಶಿಸಿ… ಸಕಲ ಜನರನ್ನು ಉದ್ದಾರ ಮಾಡಿರುವಂತ ದಯಾನಿಧಿ…, ಅನಿಮಿತ್ಯ ಬಂದು, ಆಪತ್ಬಾಂಧವ,… ಕರುಣಮೂರ್ತಿ…ನಮ್ಮ ಪ್ರೀತಿಯ ಅಜ್ಜನವರು.

ಶ್ರೀ ಸದ್ಗುರು ಸಿದ್ಧಾರೂಢರ ಜಾತ್ರಾಮಹೋತ್ವಕ್ಕೆ ಬರುವ ಭಕ್ತಾದಿಗಳು “ಸಿಧ್ದಾರೂಢರ ಅಂಗಾರ ದೇಶಕ್ಕೆಲ್ಲಾ ಬಂಗಾರ”, “ಸಿದ್ಧಾರೂಢರ ರೊಟ್ಟಿ ತಿಂದವರೆಲ್ಲಾ ಗಟ್ಟಿ” ಹೀಗೆ ಅಜ್ಜನ ಹರ್ಷೋದ್ಘಾರಗಳನ್ನು ಕೂಗುತ್ತಾ ಭಕ್ತಿ ಭಾವೈಕ್ಯತೆಯ ಅಜ್ಜನ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದಲ್ಲದೇ ಶ್ರೀಮಠದಲ್ಲಿ ಪ್ರತಿನಿತ್ಯ ಭಜನೆ ಹಾಗೂ ಓಂ ನಮಃ ಶಿವಾಯ ವೇದ ಘೋಷ ಮೊಳಗುತ್ತಿರುತ್ತದೆ.

 

 ರಾಜ್ಯದ ಜನತೆ ಸಾಕ್ಷಾತ್ ಶಿವನವತಾರಿ ಶ್ರೀ ಸದ್ಗುರು ಶ್ರೀಗಳ ದರ್ಶನವೇ ಒಂದು ಸೌಭಾಗ್ಯವಾಗಿದ್ದು, ಶ್ರೀಗಳ ದರ್ಶನಾರ್ಶಿವಾದ ಪಡೆದು ಭಕ್ತರೆಲ್ಲಾ ಪುನೀತರಾಗಲಿ‌ ಎಂದು ಡಾ. ಶರಣಪ್ಪ ಕೊಟಗಿ ಶುಭ ಹಾರೈಸಿದ್ದಾರೆ.

 

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button