
ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಎನ್ಇಎಸ್ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಸೋಮವಾರದಂದು ಅದ್ದೂರಿಯಾಗಿ ನೇರವೆರಿತು.

ಈ ಸಮಾರಂಭವನ್ನು ಡಾ.ಹನಮಂತಪ್ಪ ಬೆಳಗಲಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಧ್ಯಾರ್ಥಿಗಳ ಜೀವನ ಗೋಲ್ಡ್ ನ ಲೈಪ್ ಎಂಬ ಮಾತಿದೆ. ಈ ವೇಳೆ ವಿಧ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಈ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಳಿಕ ವಿಧ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಎಮ್.ಎ.ಸಿದ್ದಂತಿ, ಶಿಲ್ಪಾ ಪಾಟೀಲ, ಶಾಮ ದೇಸಾಯಿ, ಆನಂದ್ ಕುಲಕರ್ಣಿ, ರವಿಂದ್ರ್ ದೇಸಾಯಿ, ಶ್ರೀನಿವಾಸ ದೇಸಾಯಿ, ಸದಾನಂದ ಕಾಮತ್, ಪ್ರಿನ್ಸಿಪಲ್ ಪ್ರೇರಣಾ ಶಿಂಧೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
2
+1
3
+1
+1
+1
+1
+1




