ಯಲ್ಲಾಪುರ : ಬೈಕ್ ಗೆ ಡಿಕ್ಕಿ ಪಡಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿ ಅಶೋಕ ರಾಜನಾಳ (47), ಧಾರವಾಡದ ಹೊಸ ಯಲ್ಲಾಪುರದ ಸತೀಶ ಪಾಟೀಲ್ (45), ಸುಭಾಷ್ ಪಾಟೀಲ್ (47) ಆರೋಪಿಗಳಾಗಿದ್ದು, ಇವರು ಫೆ.24 ರಂದು ಹಳಿಯಾಳ ರಸ್ತೆಯಲ್ಲಿ ತಮ್ಮ ಇನೋವಾ ಕ್ರಿಸ್ಟಾ ವಾಹನದಲ್ಲಿ ಹೋಗುತ್ತಿದ್ದಾಗ ಯಲ್ಲಾಪುರದ ಜಯಕುಮಾರ ಪಿಳ್ಳೆ (23) ಹಾಗೂ ಇಹಿಂಬ್ರಾ ಶೇಖ (28) ಎಂಬುವವರ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಪಡೆಸಿದ್ದಾರಂತೆ. ಇದನ್ನು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಟ್ಟೆಗೆ ಒಡ್ಡು, ತಲವಾರದಿಂದ ಕುತ್ತಿಗೆಗೆ ಹೊಡೆಯಲು ಮುಂದಾಗಿದ್ದಾರಂತೆ. ಇದರಿಂದ ತಪ್ಪಿಸಿಕೊಂಡ ಜಯಕುಮಾರ ಪಿಳ್ಳೆ, ಇಬ್ರಾಹಿಂ ಶೇಖ ಸ್ಥಳದಿಂದ ತಪ್ಪಿಸಿಕೊಂಡು ಈ ಕುರಿತು ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1