ಹುಬ್ಬಳ್ಳಿ : ಯುವಕನೋರ್ವ ತುಂಬಿದ ನೀರಿನ ಕಣಿವೆಗೆ ಹಾರಿ ಮೃತಪಟ್ಟಿರುವ ಘಟನೆ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಹೊರವಲಯದ ಕಣಿವೆಯಲ್ಲಿ ನಡೆದಿದೆ.
ವಿಡಿಯೋ ಇಲ್ಲಿದೆ..👇
ಶಶಾಂಕ ಮಾಗಡಿ (21) ಮೃತ ಯುವಕ, ಈತ ಕಾಲೇಜು ಶಿಕ್ಷಣದ ಜೊತೆಗೆ ಕಂಪ್ಯೂಟರ್ ತರಭೇತಿಯನ್ನು ಪಡೆಯುತ್ತಿದ್ದನು. ಆದರೆ ಫೆ.28 ರಂದು ಈತನ ತಂದೆ ನಡೆಸುತ್ತಿದ್ದ ಕಂಪ್ಯೂಟರ್ ಅಂಗಡಿಯಿಂದ ಮನೆಗೆ ಹೋಗುವುದಾಗಿ ಹೇಳಿ ಮನೆಗೆ ಬರದೇ ಕಾಣೆಯಾಗಿದ್ದನು. ಶಶಾಂಕನಿಗಾಗಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು ಕಾಣಿವೆಯಲ್ಲಿ ಶವವೊಂದು ತೇಲಾಡುತ್ತಿರುವುದನ್ನು ಗಮನಿಸಿದ ದಾರಿಹೋಕರು ಮೃತ ಶಶಾಂಕ ಕುಟುಂಬದವರಿಗೆ ಮಾಹಿತಿ. ತದನಂತರ ಮೃತದೇಹವನ್ನು ಕುಟುಂಬಸ್ಥರು ಗುರುತು ಮಾಡಿದ್ದಾರೆ. ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಘಟನೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1