
ಮಹಿಳೆ ದಿಟ್ಟತನದಿಂದ ಮುಂದೆ ಸಾಗಬೇಕು : ಶಾಂತಿಲಾಲ್ ಮುಟ್ಟಾ
ಹುಬ್ಬಳ್ಳಿ: ಮಹಿಳೆಯು ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯು ಗುರುತಿಸಿಕೊಂಡು ಸಮಾಜದ ಪ್ರಗತಿಯ ಪ್ರಮುಖ ಭಾಗವಾಗಿದ್ದಾಳೆ’ ಎಂದು ಭಾರತೀಯ ಜೈನ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಾಂತಿಲಾಲ್ ಮುಟ್ಟಾ ಅವರು ಹೇಳಿದರು.
ಇಲ್ಲಿನ ಗೋಕುಲರಸ್ತೆಯ ಕಾಟನ್ ಕೌಂಟಿ ಕ್ಲಬ್’ನಲ್ಲಿ ಬಿಜೆಎಸ್’ದಿಂದ ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿಯಾಗಿ, ಸತಿಯಾಗಿ, ಅಕ್ಕ-ತಂಗಿಯಾಗಿ, ಗೆಳತಿ, ಗುರುವಾಗಿ ನಾನಾ ಪಾತ್ರವಹಿಸುವ ಮಹಿಳೆಯರಿಗೆ ಸರಿಸಾಟಿ ಯಾರು ಇಲ್ಲ. ಇತಂಹ ಮಹಿಳೆಯರ ದಿನಾಚರಣೆಯನ್ನು ಎಲ್ಲೆಡೆ ವಿಭಿನ್ನವಾಗಿ ಆಚರಿಸಲಾಗಿದೆ. ಅದೇ ರೀತಿಯಾಗಿ ಭಾರತೀಯ ಜೈನ್ ಸಂಘಟನೆಯಿಂದಲೂ ಅದ್ಧೂರಿಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಇದೇ ವೇಳೆ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಮತ್ತು ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳು ಬಿಗಿಯಾಗಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಅದರಂತೆ ವೀಣಾ ಅಟವಾಲೆ ಅವರಿಗೆ ವಿದ್ಯಾ ವಿಭೂಷಣ ಅವಾರ್ಡ್, ಡಾ.ಮಹೀಮಾ ದಂಡ ಅವರಿಗೆ ಬಿಜಿಎಸ್ ಇನ್ಪೈರ್ ಹುಮನ್ ಇನ್ ಮೆಡಿಕಲ್ ಆ್ಯಂಡ್ ಸರ್ವಿಸ್ ಅವಾರ್ಡ್, ಕ್ರೀಡಾ ಕ್ಷೇತ್ರದಲ್ಲಿ ಭಾರತಿ ಕೊಠಾರಿ ಅವರಿಗೆ ಬಿಜೆಎಸ್ ಖೇಲ್ ಶ್ರೀ ಅವಾರ್ಡ್, ಸ್ಪೂರ್ತಿ ಪವಾರ್ ಅವರಿಗೆ ಬಿಜೆಎಸ್ ಶಿಲ್ಪ ಶಕ್ತಿ ಅವಾರ್ಡ್, ರೇಷ್ಮಾ ಜೈನ್ ಅವರಿಗೆ ಬಿಜೆಎಸ್ ಧರ್ಮ ಜ್ಯೋತಿ ಅವಾರ್ಡ್, ನೀಪಾ ಮೆಹ್ತಾ ಅವರಿಗೆ ಬಿಜೆಎಸ್ ಟ್ರೈಲ್ಬಾಜಿಂಗ್ ಹುಮನ್ ಎಂಟರ್ಪೈನರ್ ಅವಾರ್ಡ್, ಅಂಕಿತಾ ಗೋಕಲೆ ಅವರಿಗೆ ಬಿಜೆಎಸ್ ಗೋಲ್ಡನ್ ಮಿಕ್ ಅವಾರ್ಡ್, ಕೋಮಲ್ ಜೈನ್ ಅವರಿಗೆ ಪ್ರೇರಣಾ ಶಕ್ತಿ ಅವಾರ್ಡ್ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಎಸ್’ನ ಎಂಡಿ ಕೋಮಲ್ ಜೈನ್, ರಾಷ್ಟ್ರೀಯ ಪೂರ್ವ ಅಧ್ಯಕ್ಷ ಪ್ರಪುಲ್ ಪಾರೇಕ್, ರಾಜೇಂದ್ರ ಲಂಕಡ್, ನಂದಕಿಶೋರ್, ಪಂಕಜ್ ಚೋಪ್ರಾ, ಕೋಮಲ್ ಜೈನ್, ವಿಕ್ರಮ ಜೈನ್, ಸಂದೀಪ್ ಬಪ್ನಾ, ಗೌತಮ್ ಬಪ್ನಾ, ಮುಖೇಶ್ ಹಿಂಗರ್, ಕಲಪೇಶ ಪಟವಾರಿ, ಮಹಾವೀರ ಕೊಠಾರಿ, ವಿಶಾಲ ಜೈನ್, ಮುಖೇಶ್ ಬಗ್ರಾಚ ಸೇರಿದಂತೆ ಮುಂತಾದ ಗಣ್ಯಮಾನ್ಯರು ಉಪಸ್ಥಿತರಿದ್ದರು.
ಕೇಕ್ ಕತ್ತರಿಸಿ ಸಂಭ್ರಮಾಚರಣೆ
ಮಹಿಳಾ ದಿನದ ಕಾರ್ಯಕ್ರಮದಲ್ಲಿ ಎಲ್ಲಾ ನಾರಿಮಣಿಗಳು ಕೇಕ್ ಕತ್ತರಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನ ಆಚರಿಸಿದರು. ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದರು.