ಪಾಳುಮನೆಯಲ್ಲೇ ಮಹಿಳೆಗೆ ಗ್ಯಾಂಗ್ರೇಪ್ — ನಾಲ್ವರು ಆರೋಪಿ ಬಂಧನ
ಕೊಪ್ಪಳ .ಜಿಲ್ಲೆ ಕುಷ್ಟಗಿ ತಾಲೂಕಿನ ಮಾದ್ದೂರು ಗ್ರಾಮದಲ್ಲಿ ನಡೆದ ಭೀಕರ ಘಟನೆ ಮತ್ತೊಮ್ಮೆ ಮಹಿಳಾ ಸುರಕ್ಷತೆಯ ಪ್ರಶ್ನೆಯನ್ನು ಎಬ್ಬಿಸಿದೆ. ಹಣ ಕೊಡುವ ನೆಪದಲ್ಲಿ ಕರೆಸಿಕೊಂಡ ಮಹಿಳೆಯ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಹೊಸಪೇಟೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಹಣ ಸಂಗ್ರಹಿಸುವ ಸಲುವಾಗಿ ಕುಷ್ಟಗಿಗೆ ತೆರಳಿದ್ದರು. ಆರೋಪಿ ಲಕ್ಷ್ಮಣ್ ಎಂಬಾತ ಕಳೆದ ಆರು ತಿಂಗಳಿನಿಂದ ಮಹಿಳೆಗೆ ಪರಿಚಿತರಾಗಿದ್ದು, ಅವರ ಬಳಿ ಸುಮಾರು ₹5,000 ಬಾಕಿ ಇಟ್ಟುಕೊಂಡಿದ್ದಾನೆ. ಈ ಹಣ ಮರುಪಾವತಿಸುವ ನೆಪದಲ್ಲಿ ಮಹಿಳೆಯನ್ನು ಕುಷ್ಟಗಿಗೆ ಬರಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯನ್ನು ಬೈಕ್ನಲ್ಲಿ ಪಾಳುಬಿದ್ದ ಮನೆಯನ್ನು ಕರೆದುಕೊಂಡು ಹೋಗಿ, ಆರೋಪಿಗಳು ಆಕೆಗೆ ಮದ್ಯ ಅಥವಾ ಮಾದಕಪದಾರ್ಥ ಮಿಶ್ರಿತ ಪಾನೀಯ ಕೊಟ್ಟ ನಂತರ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ತನಿಖೆ ತಿಳಿಸಿದೆ. ಘಟನೆಯ ನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ನಾಲ್ವರು ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗಿದೆ.
ಕುಷ್ಟಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ವೇಗಗೊಳಿಸಿದ್ದಾರೆ.
ವರದಿ ಶಶಿಕಾಂತ್ ಕೊರವರ




