ಜಿಲ್ಲೆರಾಜಕೀಯರಾಜ್ಯ

ಧಾರವಾಡ: 9 ಗಂಟೆ ವೇಳೆ ಶೇ.9.38 ರಷ್ಟು ಮತದಾನ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬಿಸಿಲು ಝಳಕ್ಕೆ ಬೆದರಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳತ್ತ ಉತ್ಸಾಹದಿಂದ ಧಾವಿಸಿ ಮತ ಚಲಾಯಿಸುತ್ತಿದ್ದಾರೆ.

ಹತ್ತು ಗಂಟೆಯ ನಂತರ ಬಿಸಿಲು ನೆತ್ತಿ ಸುಡುವ ಕಾರಣಕ್ಕೆ ಮತದಾರರು ಬೆಳಗ್ಗೆಯೇ ಮತಗಟ್ಟೆಯಲ್ಲಿ ಕಾಣಿಸಿಕೊಂಡ ಪರಿಣಾಮ ಮತ ಕೇಂದ್ರಗಳು ರಶ್ ಆಗಿವೆ ಹಾಗೂ ಉತ್ಸಾಹ ಕಂಡುಬಂದಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬೆಳಗ್ಗೆ 9 ಗಂಟೆ ವೇಳೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ9.38ರಷ್ಟು ಮತದಾನವಾಗಿದೆ. ಇಲ್ಲಿ ಒಟ್ಟು 18.31.975 ಮತದಾರರಿದ್ದು, 9 ಗಂಟೆ ವೇಳೆ ಶೇ. 9.38 ಮತಗಳು ಚಲಾವಣೆ ಆಗಿದೆ.

ನವಲಗುಂದ 7.88 ಶೇ., ಕುಂದಗೋಳ 5.8 ಶೇ., ಧಾರವಾಡ 10.51 ಶೇ., ಹುಬ್ಬಳ್ಳಿ-ಧಾರವಾಡ ಪಶ್ಚಿಮ 11.32 ಶೇ., ಹು-ಧಾ ಕೇಂದ್ರ 11.03 ಶೇ., ಹು-ಧಾ ಪೂರ್ವ 10.05 ಶೇ., ಕಲಘಟಗಿ 8.14 ಶೇ., ಶಿಗ್ಗಾಂವಿ 8.29 ಶೇ. ಮತದಾನವಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button