ಹುಬ್ಬಳ್ಳಿ: ಭಗತ್ ಸಿಂಗ್ ಸೇವಾ ಸಂಘದ (ರಿ) ಅಧ್ಯಕ್ಷ ವಿಶಾಲ ಜಾದವ್ ಅವರ ನೇತೃತ್ವದಲ್ಲಿ ಭಗತ್ ಸಿಂಗ್, ರಾಜಗುರು, ಸುಖದೇವ ಅವರ ಬಲಿದಾನ ದಿನದ ಅಂಗವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂಡು, ಇತರರಿಗೆ ಮಾದರಿಯಾಗಿದ್ದಾರೆ.
ಹೌದು, ಈಗಾಗಲೇ ಒಂದಿಲ್ಲೊಂದು ಸಮಾಜ ಮುಖಿ ಕಾರ್ಯದಿಂದ ಗುರುತಿಸಿಕೊಂಡಿರುವ ವಿಶಾಲ ಜಾದವ್ ಅವರು, ಬಲಿದಾನದ ಅಂಗವಾಗಿ ಗೋ ಶಾಲೆಗೆ ಮೇವು ವಿತರಣೆ ಮಾಡಿದರು.
ಬಳಿಕ ರಾಷ್ಟ್ರೋತ್ತಮ ರಕ್ತ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ, ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ, ಸರ್ಕಾರಿ ಶಾಲೆಗೆ ಕಲಿಕಾ ಸಾಮಗ್ರಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಗಂಡಗಾಳಕರ, ಕಲ್ಲಪ್ಪ ಶಿರಕೋಳ, ಪ್ರವೀಣ ಬಳ್ಳಾರಿ, ಹರೀಶ ಸರವಾಲೆ, ಗಂಗಾಧರ ಶೆಟ್ಟರ್, ಆಕಾಶ ಗುಡಿಹಾಳ, ಅಜಯ್ ಗುತ್ತಲ ಸೇರಿದಂತೆ ಮುಂತಾದವರು ಇದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1