ಹುಬ್ಬಳ್ಳಿ: ಜರ್ಮನಿಯ ಹಿಟ್ಲರ್, ಮುಸಲೋನಿ, ಸದ್ದಾಂಹುಸೇನ ಇದ್ದಾರಲ್ಲಾ, ಅದೇ ರೀತಿಯಲ್ಲಿ ದೇಶದಲ್ಲಿ ಜಾತಿ, ಮತ, ದ್ವೇಷ ಮಾಡುವ ಮೋದಿ ಪ್ರಧಾನಿ ಆಗೋಕ್ಕೆ ಅನರ್ಹ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನದಲ್ಲಿಯೇ ಕಿಡಿಕಾರಿದ್ದಾರೆ.
ನಗರದ ಸೆಟ್ಲಮೆಂಟ್’ನಲ್ಲಿ ಚುನಾವಣೆ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಗೋದ್ರಾ ಹತ್ಯೆ ಸಂದರ್ಭದಲ್ಲಿ ಮೋದಿ ಎಲ್.ಕೆ.ಅಡ್ವಾಣಿ ಅವರ ಮಾತು ಕೇಳಿಲ್ಲ, ರಾಜಧರ್ಮ ಪಾಲಿಸಿಲ್ಲ. ಮೋದಿಗೆ ಅವರ ಹೆಂಡತಿ ಕರಿಮಣಿ ಉಳಿಸಿಕೊಳ್ಳಲು ಆಗಲಿಲ್ಲ, ಬೇರೆ ಜನರ ಕರಿಮಣಿ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ರಿಸಲ್ಟ್ ಬಂದ ನಂತರ ಮೋದಿ ಮನೆಗೆ ಹೋಗತ್ತಾನೆ ಎಂದರು.
ಈ ಹಿಂದೆ ಗೃಹ ಸಚಿವ ಅಮಿತ್ ಶಾನನ್ನು ಗಡಿಪಾರು ಮಾಡಿದವರು ನಾವು ಎಂದಿದ್ದಾರೆ.
ವಿಡಿಯೋ…
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
1
+1
+1
+1