ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳಿಗೆ ಪಾಲಕರಿಂದ ಸ್ವಾಗತ
ಹುಬ್ಬಳ್ಳಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭಾರತದ ವಿದ್ಯಾರ್ಥಿಗಳ ಮೇಲೆ ಸಹ ಪರಿಣಾಮ ಬೀರಿತ್ತು. ಓದಲು ತೆರಳಿದ್ದ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು. ಆದರೆ ಸರ್ಕಾರದ ಸಹಾಯದಿಂದ ಸದ್ಯ ಕೆಲ ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ. ಕರ್ನಾಟಕದ ಹಲವಾರು ವಿದ್ಯಾರ್ಥಿಗಳು ಸಹ ಅಲ್ಲಿದ್ದು, ಇದೀಗ ಇಬ್ಬರು ವಿದ್ಯಾರ್ಥಿಗಳು ವಾಪಾಸ್ ಆಗಿದ್ದಾರೆ. ಮರಳಿ ಬಂದ ಅವರನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸ್ವಾಗತಿಸಿದ್ದಾರೆ. ಕುಟುಂಬವನ್ನು ಸೇರುತ್ತಿರುವ ಸಂತಸದಲ್ಲಿರುವ ವಿದ್ಯಾರ್ಥಿಗಳ ಕೆಲ ವಿಡಿಯೋ ಈ ಮೇಲೆ ಇದೆ.
ಯುಕ್ರೇನ್ ಹಾಗೂ ರಷ್ಯಾ ಯುದ್ದದ ಕಾರಣದಿಂದ ಸಿಲುಕಿಕೊಂಡಿದ್ದ ಕನ್ನಡಿಗರು ಊಟಕ್ಕಾಗಿ ಸಹ ಪರದಾಡುವಂತ ಪರಿಸ್ಥಿತಿ ಇತ್ತು, ಇಂದು ಸಂಜೆ ಹುಬ್ಬಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿವಾನಿ ಹಾಗೂ ರಂಜಿತಾ ಎಂಬ ವಿದ್ಯಾರ್ಥಿಗಳನ್ನು ಸಚಿವ ಶಿವರಾಮ್ ಹೆಬ್ಬಾರ್ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಸಿಹಿ ಕೊಟ್ಟು ಮಾತುಕತೆ ನಡೆಸಿದರು. ಇದೇ ವೇಳೆ ಮಗಳನ್ನು ಕಂಡ ತಾಯಿಯು ಕಣ್ಣೀರಾದರು.