ಹುಬ್ಬಳ್ಳಿ : ದ್ವಿ ಚಕ್ರ ವಾಹನಗಳ ಕಳ್ಳತನವನ್ನೆ ದಂಧೆಯಾಗಿಸಿಕೊಂಡಿದ್ದ ಆನಂದ ನಗರ ಮೂಲದ ಮಹಾಂತೇಶ್ ಕಲಾಲ್ ಎಂಬುವನನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಇನ್ಸೆಕ್ಟರ್ ಎಂ.ಎಸ್. ಹೂಗಾರ ಹಾಗೂ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಯನ್ನ ಬಂಧನ ಮಾಡಿದ್ದಾರೆ.
ಇನ್ನೂ ಬಂಧಿತನಿಂದ 5.80 ಲಕ್ಷ ಮೌಲ್ಯದ 12 ವಿವಿಧ ಕಂಪನಿಯ ಬೈಕ್ ಗಳು,1.10 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯವನ್ನು ನಿರ್ವಹಿಸಿದ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಮ್.ಎಸ್.ಹೂಗಾರ, ಪಿ.ಎಸ್.ಐ ರವರುಗಳಾದ ದೇವಿಂದ್ರ ಮಾವಿನಂಡಿ, ಮಲ್ಲಿಕಾರ್ಜುನ ಹೊಸೂರ ಮತ್ತು ಸಿಬ್ಬಂದಿ ಜನರಾದ ಗೂಳೀಶ ಎಚ್.ಎಮ್. ಎಸ್.ಎ ಯರಗುಪ್ಪಿ, ನಾಗರಾಜ ಗುಡಿಮನಿ, ಪಿ.ಎಲ್ ಗೋವಿಂದಪ್ಪನವರ, ಪ್ರಕಾಶ ಕಲಗುಡಿ, ಎಮ್.ಎಚ್ ಹಾಲವರ, ಎಸ್.ಬಿ ಯಳವತ್ತಿ, ಡಿ.ಆರ್ ಪಮ್ಮಾರ, ಎ.ಎಚ್ ಡೊಳ್ಳಿನ, ಟಿ.ವೈ.ಗಡ್ಡದವರ, ನೆಹರೂ ಲಮಾಣಿ, ರೇಣಪ್ಪ.ಎಚ್ ಸಿಕ್ಕಲಗೇರಿ, ಜ್ಞಾನೇಶ್ವರ ಮಾಂಗ ರವರನ್ನೊಳಗೊಂಡ ತಂಡದ ಕಾರ್ಯವೈಖರಿಯನ್ನ ಪೋಲಿಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.