ಕಲಘಟಗಿಯಲ್ಲಿ ಇತಿಹಾಸ ಸೃಷ್ಟಿಸಿದ “ಧ್ವಜ ಜಾಥಾ” : ಹೊಸ ಕ್ರಾಂತಿಗೆ ಮುನ್ನುಡಿ ಬರೆದ ಲಾಡ್...!
ಕಲಘಟಗಿ: ಭಾರತದಲ್ಲಿ 76 ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ಅದರಂತೆ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ 9 ಕಿ.ಮೀ ಉದ್ದದ ತ್ರಿವರ್ಣ ಧ್ವಜ ರ್ಯಾಲಿ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.
ಹೌದು, ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ಭಾರತದ 75 ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲಘಟಗಿ ಹೊರವಲಯದ ದಾಸ್ತಿಕೊಪ್ಪ ಬ್ರಿಡ್ಜ್ ನಿಂದ ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡ ಈ ಗಿನ್ನಿಸ್ ದಾಖಲೆಯ ಧ್ವಜ ಜಾಥಾ, ಕಲಘಟಗಿ ಪಟ್ಟಣದ ಮೂಲಕ ಗಳಗಿನಗಟ್ಟಿ ಕ್ರಾಸ್ ವರೆಗೆ ನಡೆಯಿತು. ಈ ಧ್ವಜ ಯಾತ್ರೆದಲ್ಲಿ ಧಾರವಾಡ ಜಿಲ್ಲೆ ಸೇರಿದಂತೆ ರಾಜ್ಯದ ಇನ್ನಿತರ ಕಡೆಗಳಿಂದಲೂ ಸಾವಿರಾರು ಜನರು ಭಾಗಿಯಾಗಿದ್ದರು.
ಇನ್ನು ತ್ರಿವರ್ಣ ಯಾತ್ರೆಗೆ ಬಳಸಿದ ರಾಷ್ಟ್ರಧ್ವಜ 8.5 ಕಿ.ಮೀ ಉದ್ದ ಹಾಗೂ 9 ಅಡಿ ಅಗಲವಿದ್ದು, ಬೆಂಗಳೂರಿನಲ್ಲಿ 200 ಕಾರ್ಮಿಕರು ನಿರಂತರವಾಗಿ ಒಂದು ತಿಂಗಳಿಂದ ತಯಾರಿಸಿದ್ದಾರೆ.
ಇಂತಹ ಐತಿಹಾಸಿಕ ತ್ರಿವರ್ಣ ಧ್ವಜಯಾತ್ರೆ ಉದ್ದಕ್ಕೂ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗಿದವು. ಅಲ್ಲದೇ ರಾಷ್ಟ್ರಭಕ್ತಿ ಗೀತೆಗಳು ಮೈಮೇಲಿನ ಕೂದಲನ್ನು ನಿಮಿರುವಂತೆ ಮಾಡಿದವು.