ಪಂಜಾಬ್ ನಲ್ಲಿ ಜಯಭೇರಿ: ಹುಬ್ಬಳ್ಳಿಯಲ್ಲಿ ಆಪ್ ಕಾರ್ಯಕರ್ತರಿಂದ ವಿಜಯೋತ್ಸವ
ಹುಬ್ಬಳ್ಳಿ : ಪಂಚರಾಜ್ಯ ಚುನಾವಣೆಯಲ್ಲಿ ಆಪ್ ಪಂಜಾಬ್ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಆಯ್ಕೆಯಾದ ಆಮ್ ಆದ್ಮಿ ಪಕ್ಷದ ಧಾರವಾಡ ಜಿಲ್ಲಾ ಘಟಕದಿಂದ ವಿಜಯೋತ್ಸವ ಆಚರಿಸಿದರು.
ಕುಣಿದು ಕುಪ್ಪಳಿಸಿದ ಆಪ್ ಕಾರ್ಯಕರ್ತರು ವಿಡಿಯೋ…👇
ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಆಪ್ ಕಾರ್ಯಕರ್ತರು ಅರವಿಂದ ಕ್ರೇಜಿವಾಲ್ ಹಾಗೂ ಆಪ್ ಪರ ಜೈಕಾರಗಳನ್ನು ಹಾಕಿ ತಮಟೆ ವಾದ್ಯಗಳನ್ನು ಬಡೆದು ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಧಾರವಾಡ ಜಿಲ್ಲಾಧ್ಯಕ್ಷರಾದ ಅನಂತಕುಮಾರ್ ಬುಗಡಿ ಮಾತನಾಡಿ, ದೆಹಲಿ ಅರವಿಂದ್ ಕ್ರೇಜಿವಾಲ್ ನೇತೃತ್ವದ ಪಂಚರಾಜ್ಯ ಮುಖ್ಯಮಂತ್ರಿ ಪಂಜಾಬ್ ಜಯಗಳಿಸಿದ್ದು, ಇತಿಹಾಸದಲ್ಲಿಯೇ ಹಸ್ತಾಕ್ಷರದಿಂದ ಬರೆದಿಡುವಂತಹ ದಿನವಾಗಿದೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ. ಈ ರಾಜ್ಯದಲ್ಲಿಯೂ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ಪಕ್ಷವನ್ನು ಗೆಲ್ಲಲು ಶ್ರಮಿಸುತ್ತಿದ್ದಾರೆ. ಪಂಜಾಬ್ ಗೆಲುವು ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು ಖುಷಿ ತಂದಿದೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗ್ರಾಮೀಣ ಅಧ್ಯಕ್ಷ ವಿಕಾಸ ಸೊಪ್ಪಿನ, ಶಶಿಕುಮಾರ ಸುಳ್ಳದ ಕಾರ್ಯದರ್ಶಿ, ರವಣಸಿದ್ಧಪ್ಪ ಹುಬ್ಬಳ್ಳಿ ವಕ್ತಾರ, ಶಾಮ ನರಗುಂದ, ಬಾಬುಶೇಖ ಬಿರಾದರ, ವಿಶ್ವನಾಥ, ದೀಪಿಕಾ ಮುತಾ, ಕಸ್ತೂರಿ ಮುರಗೋಡ, ಸುನಂದ ಕರಡಿಗುಡ್ಡ ಸೇರಿದಂತೆ ಮುಂತಾದವರು ಇದ್ದರು.