
ಪ್ರಕ್ರಿಯೆಯಲ್ಲಿರುವುದು ನಿಜ.. ಆದರೆ, ಈಶ್ವರನೇ ದಂದ್ವದಲ್ಲಿ..!!
ಹುಬ್ಬಳ್ಳಿ: ಕಾರ್ಪೋರೇಷನ್ ಕಮಿಷನರ್ ವರ್ಗಾವಣೆ ವಿಚಾರ ಕ್ಷಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹುಬ್ಬಳ್ಳಿ ಧಾರವಾಡದ ಉನ್ನತ ಅಧಿಕಾರಿಗಳ ಮೂಲಗಳ ಪ್ರಕಾರ, ವರ್ಗಾವಣೆ ಪ್ರಕ್ರಿಯೆ ಹಂತದಲ್ಲಿದಲ್ಲಿದ್ದು ಯಾವುದೇ ಸಮಯದಲ್ಲಿ ವರ್ಗಾವಣೆ ಆದೇಶ ಹೊರಬೀಳಬಹುದು !!
ಹಾಗಾದರೆ, ಸದ್ಯದ ಹು-ಧಾ ಪಾಲಿಕೆ ಕಮಿಷನರ್ ಡಾ. ಈಶ್ವರ ಉಳ್ಳಾಗಡ್ಡಿ ಅವರು ತಾವಾಗಿಯೇ ವರ್ಗಾವಣೆ ಮುಂದಾಗಿದ್ದಾರೇ ಅಥವಾ ಬೇರೆಯವರ ಚಿತಾವಣೆಗೆ ಡಾ. ಈಶ್ವರ ಬಲಿಯಾಗುತ್ತಿದ್ದಾರಾ ಎಂಬ ಚರ್ಚೆಗಳೂ ಶುರುವಾಗಿವೆ.
ಡಾ. ಈಶ್ವರ ಪಾಲಿಕೆಗೆ ಬಂದು ಬರೋಬ್ಬರಿ ಒಂದೂವರೆ ವರ್ಷಗಳಾಯಿತು. ಯಾವುದೇ ಕೆಎಎಸ್ ಅಧಿಕಾರಿಗಳು ಕನಿಷ್ಠ 2 ವರ್ಷ ವರ್ಗಾವಣೆ ಮಾಡಕೂಡದು ಎಂದು ಕೆಲವರ ಮುಂದೆ ಷರತ್ತು ಹಾಕಿಕೊಂಡೆ ಬರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಎರಡು ವರ್ಷ ಪೂರ್ಣಗೊಳ್ಳುವ ಮುನ್ನವೇ ಡಾ. ಈಶ್ವರ ಉಳ್ಳಾಗಡ್ಡಿಯವರ ವರ್ಗಾವಣೆ ವಿಚಾರ ಮುನ್ನೆಲೆಗೆ ಬಂದಿರುವುದು ಅದೇನೋ ಎಡವಟ್ಟಾಗಿದೆ ಎಂದೇ ಅರ್ಥ ಎಂದು ಪಾಲಿಕೆ ನೌಕರರು ಮಾತನಾಡುತ್ತಿದ್ದಾರೆ.
ಕಮಿಷನರ್ ಅವರನ್ನು ಬಲ್ಲವರು ಹೇಳುವಂತೆ, ಈಶ್ವರಗೆ ವರ್ಕ್ ಲೋಡ್ ಜಾಸ್ತಿಯಾಗಿದೆಯಂತೆ. ಇದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮತ್ತು ಸ್ಥಳೀಯವಾಗಿ ಬಿಜೆಪಿ ಅಧಿಕಾರ. ಇವರಿಬ್ಬರ ಒತ್ತಡಕ್ಕೆ ಸಿಲುಕಿ ಮಾನಸಿಕವಾಗಿ ಒದ್ದಾಡುವಂತಾಗಿದೆ ಎನ್ನಲಾಗುತ್ತಿದೆ.
ಹಾಗಾಗಿ ಡಾ. ಈಶ್ವರ ತಾವಾಗಿಯೇ ವರ್ಗಾವಣೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಬೆಂಗಳೂರಲ್ಲಿ ತಳೂರಿದ್ದೇಕೆ..? ನೌಕರ ಸ್ನೇಹಿತರು, ಇನ್ನಾರು ತಿಂಗಳು ಹೇಗೋ ನಿಭಾಯಿಸಿಕೊಂಡು ಹೋಗು, ಪ್ಲಾನ್ಸ್ ಕಮಿಟ್ ಮೆಂಟ್ ಕಂಪ್ಲೀಟ್ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರಂತೆ. ಅದಕ್ಕಾಗಿ ಬೆಂಗಳೂರಲ್ಲೇ ತಳವೂರಿರುವ ಕಮಿಷನರ್ ಡಾ. ಈಶ್ವರ, ವರ್ಗಾವಣೆ ಪ್ರಕ್ರಿಯೆ ಮುಂದೂಡುವಂತೆ ಸಂಬಂಧಿಸಿದವರ ಮುಂದೆ ಕೇಳಿಕೊಳ್ಳುತ್ತಿದ್ದಾರಂತೆ.
ಇದು ನಿಜವಾದರೆ, ಇನ್ನಷ್ಟು ದಿನ, ತಿಂಗಳು ಡಾ. ಈಶ್ವರ ಕಮಿಷನರ್ ಆಗಿಯೇ ಮುಂದುವರಿಯುತ್ತಾರೆ. ಮನವಿಗೆ ಸಕಾರಾತ್ಮಕ ಬೆಂಬಲ ಸಿಗದಿದ್ದರೆ ಕೆಲವೇ ದಿನಗಳಲ್ಲಿ ಕಮಿಷನರ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ ಎನ್ನುತ್ತವೆ ಪಾಲಿಕೆ ಮೂಲಗಳು.
ವರ್ಗಾವಣೆಯಿಂದ ಖಾಲಿಯಾಗುವ ಹುದ್ದೆಗೆ ಕಮಿಷನರ್ ಆಗಿ ಬರುವವರು ಹುಬ್ಬಳ್ಳಿಯಲ್ಲಿರುವ ಅಧಿಕಾರಿಯೊಬ್ಬರು ಬರಲಿದ್ದಾರೆ. ಅವರು ಯಾರು..? ಶೀಘ್ರವೇ ನಿಮ್ಮ ಮುಂದೆ ಪ್ರಕಟಿಸುತ್ತೇವೆ. ವೇಟ್ ಪ್ಲೀಸ್…