ಕುಂದಗೋಳ: ಕುಂದಗೋಳ ತಾಲೂಕು ಸೇರಿದಂತೆ ವಿವಿಧೆಡೆ ರೈತರ ಟ್ರ್ಯಾಕ್ಟರ್ ಟೇಲರ್’ಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಕುಂದಗೋಳ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನಲ್ಲಿ ರೈತರು ತಮ್ಮ ಹೊಲದ ಕೆಲಸ ಮುಗಿಸಿ ಮನೆಯ ಪಕ್ಕ, ರಸ್ತೆ ಪಕ್ಕ ಇಲ್ಲವೇ ದೇವಸ್ಥಾನ ಅಕ್ಕ-ಪಕ್ಕ ನಿಲ್ಲಿಸುತ್ತಿದ್ದ ಟೇಲರ್’ಗಳನ್ನೇ ಕದ್ದಿಮರು ಟಾರ್ಗೆಟ್ ಮಾಡುತ್ತಿದ್ದರು. ಇದು ರೈತಾಪಿ ಸಮುದಾಯ ಹಾಗೂ ಪೋಲಿಸರಿಗೆ ತಲೆನೋವಾಗಿ ಪರಿಣಮಿಸಿತು.
ತಾಲೂಕಿನ ವಿವಿಧೆಡೆ ಕಳ್ಳತನವಾಗಿರುವ ಟ್ರ್ಯಾಕ್ಟರ್ ಟೇಲರ್ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ಈ ಕುರಿತಂತೆ ಅಲರ್ಟ್ ಆಗಿದ್ದ ಪೋಲಿಸರು, ಎಸ್ಪಿ ಡಾ.ಗೋಪಾಲ್ ಬ್ಯಾಕೋಡ್, ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎನ್.ಬಿ.ಭರಮನಿ, ಪೋಲಿಸ್ ಉಪಾಧಿಕ್ಷಕ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಕುಂದಗೋಳ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಶಿವಾನಂದ ಅಂಬಿಗೇರ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದಿದ್ದರು.
ಶಿವಾನಂದ ಅಂಬಿಗೇರ, ಇನ್ಸ್ಪೆಕ್ಟರ್, ಕುಂದಗೋಳ ಪೋಲಿಸ್ ಠಾಣೆ
ಅದರಂತೆ ಇಂದು ಏ.12 ರಂದು ಬೆಳಿಗ್ಗೆ 2.30 ರ ಸುಮಾರಿಗೆ ಕುಂದಗೋಳ ಪಟ್ಟಣದ ಕಾಳಿದಾಸ ನಗರದಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾಗ ಕುಂದಗೋಳ ಪಟ್ಟಣದ ವೀರಭದ್ರಯ್ಯ ಅಲಿಯಾಸ್ ರಾಜು ನಾವಳಿಮಠ (27), ಮುಂಡಗೋಡ ತಾಲೂಕಿನ ಪಾಳ ಗ್ರಾಮದ ಶಂಕರಗೌಡ ಶಿವನಗೌಡ್ರ (39) ಎಂಬಾತರನ್ನು ಕರೆದೊಯ್ದು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಟೇಲರ್ ಕಳ್ಳತನ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾರೆ.
ಈ ವೇಳೆ ಕುಂದಗೋಳ ಪಟ್ಟಣ, ಬೆನಕನಹಳ್ಳಿ, ಶಿರೂರ, ಇನಾಮಕೊಪ್ಪ ಹಾಗೂ ಹುಬ್ಬಳ್ಳಿ ತಾಲೂಕಿನ ಅದರಗುಂಚಿ, ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ, ಮಲ್ಲಾಪೂರ ಗ್ರಾಮದಲ್ಲಿ ಟೇಲರ್ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿದ್ದಾರೆ.
ಸದರಿ ಆರೋಪಿಗಳಿಂದ ಒಟ್ಟು 13.40 ಲಕ್ಷ ರೂ ಮೌಲ್ಯದ 6 ಟೇಲರ್ ಹಾಗೂ 1 ನೀರಿನ ಟ್ಯಾಂಕರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 2 ಟ್ರ್ಯಾಕ್ಟರ್ ಇಂಜಿನ್’ಗಳನ್ನು ವಶಪಡಿಸಿಕೊಂಡಿದ್ದು, ಆರೋಪಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಳ್ಳರಿಂದ ವಶಪಡಿಸಿಕೊಂಡ ಟ್ರ್ಯಾಕ್ಟರ್ ಟೇಲರ್, ಇಂಜಿನ್’ಗಳ ಜತೆಗೆ ಪ್ರಕರಣ ಭೇದಿಸಿದ ಪೋಲಿಸರ ತಂಡ
ತನಿಖಾ ತಂಡದಲ್ಲಿ ಪಿಎಸ್ಐ ಆರ್.ಸಿ.ದೊಡ್ಡಮನಿ, ಮಂಜುಳಾ ಸದಾರಿಯವರ, ಇಮ್ರಾನ್ ಪಠಾಣ ಹಾಗೂ ಸಿಬ್ಬಂದಿಗಳಾದ ಚಂದ್ರು ಬಡಿಗೇರ, ಬಸವರಾಜ ಶಿರಕೋಳ, ಮಡಿವಾಳ ಜೋಡಗೇರಿ, ಪರಮೇಶಿ ಗೊಂದಿ, ಶಂಕರ ಮುತ್ತಲಗೇರಿ, ಮಲಗೌಡ ಪಾಟೀಲ್, ಮೌನೇಶ ಗಲಗ, ಮಣಿಚಂದ್ರ ಗೋಣಿನವರ, ಅರುಣ ಹಾವಾಡಿ, ಉದಯ ಕಮ್ಮಾರ, ತಾಂತ್ರಿಕ ಸಿಬ್ಬಂದಿ ಆರೀಫ್ ಗೋಲಂದಾಜ, ವಿಠ್ಠಲ ಡಂಗನವರ ಇದ್ದಾರೆ. ಇವರ ಕಾರ್ಯವನ್ನು ಮೇಲಾಧಿಕಾರಿಗಳು ಪ್ರಶಂಸಿಸಿದ್ದಾರೆ.