Top NewsUncategorizedಅಪರಾಧಜಿಲ್ಲೆ
ಸಿದ್ದಾರೂಢರ ಜಾತ್ರೆಯಲ್ಲಿ ಕಳ್ಳರ ಕೈಚಳಕ…!
ಹುಬ್ಬಳ್ಳಿ : ನಗರದ ಸುಪ್ರಸಿದ್ಧ ಸಿದ್ದಾರೂಢರಮಠದಲ್ಲಿ ಉಭಯ ಶ್ರೀಗಳ ಕರ್ತೃ ಗದ್ದುಗೆ ದರ್ಶನ ಪಡೆದು ಸಿದ್ದಾರೂಢರ ರಥೋತ್ಸವ ನೋಡಲು ಬಂದ ಭಕ್ತರ ಮಂಗಳ ಸೂತ್ರವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.
ಕುಟುಂಬದವರ ಜತೆ ರಥೋತ್ಸವ ವೈಭವ ಸವಿಯುತ್ತಿದ್ದ ನಾಗಶೆಟ್ಟಿಕೊಪ್ಪದ ವಿಜಯಲಕ್ಷ್ಮಿ ವಾಲಿ ಅವರ ಕೊರಳಲ್ಲಿನ 1.80 ಲಕ್ಷ ರೂ ಮೌಲ್ಯದ 40 ಗ್ರಾಂ ಬಂಗಾರದ ಮಾಂಗಲ್ಯ ಚೈನು ನೋಡುತ್ತಲೇ ಮಾಯವಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿಯ ಜಾತ್ರೆಯಲ್ಲಿ ಸಾಗರದಂತೆ ಹರಿದು ಬಂದ ಭಕ್ತರ ಮಠದ ಬಂಡವಾಳವಾಗಿ ಉಪಯೋಗಿಸಿದ ಕಳ್ಳರು ಒಳಗೆ, ಹೊರಗೆ ಮತ್ತು ಜನನಿಬಿಡ ಸ್ಥಳದಲ್ಲಿ ಕಳ್ಳರ ಗುಂಪು ಚಾಣಾಕ್ಷತನದಿಂದ ಮಹಿಳೆಯ ಕೊರಳಲ್ಲಿನ ಒಡವೆಯನ್ನು ಕದ್ದಿದ್ದಾರೆ. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1