ಹುಬ್ಬಳ್ಳಿ: ಹೊಟೆಲ್’ನಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟನೇ ಹೊಟೆಲ್’ನಲ್ಲಿನ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಇಲ್ಲಿನ ಶಾಂತಿ ನಗರದಲ್ಲಿನ ಟೆಸ್ಟಿ ಟಿಫನ್ಸ್ ಹೊಟೆಲ್’ನಲ್ಲಿಯೇ ಕಳ್ಳತನವಾಗಿದ್ದು, ಅಡುಗೆ ಭಟ್ಟಾ ಶಂಭು ಮುದ್ದೆಗೌಡರ್ (28) ಎಂಬಾತನೇ ಕಳ್ಳತನ ಮಾಡಿದವನಾಗಿದ್ದಾನೆ.
ಇನ್ನು ಕಳೆದ ಒಂದು ವಾರದಿಂದ ಹೊಟೆಲ್ ಬಂದ್ ಮಾಡಲಾಗಿತ್ತು. ಈ ವೇಳೆ ಅಡುಗೆ ಭಟ್ಟಾ ಶಂಭು ಹೊಟೆಲ್’ನಲ್ಲಿನ ಕುಕ್ಕರ್, ಗ್ಯಾಸ್, ಫ್ರಿಡ್ಜ್, ಹಂಚು, ಹಿಟರ್ ಮಷಿನ್, ಗ್ರ್ಯಾಂಡರ್ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಗೂಡ್ಸ್ ವಾಹನದಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾನೆ.
ಈ ಭಟ್ಟನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಹೊಟೆಲ್ ಮಾಲೀಕ ಅಭಿಷೇಕ ಪೊಲೀಸರ ಮೊರೆ ಹೋಗಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1