
ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯ ಹಿಂಭಾಗದ ಬಾಗಿಲಿನ ಲಾಕ್ ಮುರಿದು ಎಲ್‌ಇಡಿ ಟಿವಿ ಕಳ್ಳತನ ಮಾಡಲಾಗಿದೆ.
ಜೆ.ಸಿ. ನಗರದ ಪಾಲಿಕೆ ಕಟ್ಟಡದ 1ನೇ ಅಂತಸ್ತಿನಲ್ಲಿರುವ ಶಾಸಕ ಮಹೇಶ ಟೆಂಗಿನಕಾಯಿ ಅವರ ಕಚೇರಿಯಲ್ಲಿ ಕಳ್ಳತನವಾಗಿದೆ. ಕಳ್ಳರು ಶನಿವಾರ ಸಂಜೆಯಿಂದ ಸೋಮವಾರ ಬೆಳಗಿನೊಳಗೆ ಕಚೇರಿ ಹಿಂದಿನ ಬಾಗಿಲು ಲಾಕ್ ಮುರಿದು, ಅಂದಾಜು 15 ಸಾವಿರ ರೂ.ಮೌಲ್ಯದ ಎಲ್‌ಇಡಿ ಟಿವಿ ಕದ್ದಿದ್ದಾರೆ.
ಶಾಸಕರ ಕಚೇರಿ ಸಿಬ್ಬಂದಿ ಸೋಮವಾರ ಬೆಳಗ್ಗೆ ಬಂದು ನೋಡಿದಾಗಲೇ ಕಳ್ಳತನವಾಗಿರುವುದು ಗೊತ್ತಾಗಿದೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1