ಜೀವನಕ್ಕೆ ಅರ್ಥ ಬರುವುದು ಆದರ್ಶ ತತ್ವಗಳಿಂದ : ಮಹಾಂತೇಶ ಬೀಳಗಿ
ಧಾರವಾಡ: ಜೀವನಕ್ಕೆ ಒಂದು ಅರ್ಥವನ್ನು ಕೋಡಬೇಕಾದರೆ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರಿಯನ್ನು ಸಾಧಿಸಲು ನಿರಂತರವಾಗಿ ಪ್ರಯತ್ನಿಸಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ನಿರ್ವಹಣಾ ಅಧ್ಯಯನ ಸಂಸ್ಥೆಯು ಕವಿವಿಯ ಕನಕ ಅಧ್ಯಯನ ಪೀಠದ ಸಭಾಂಗಣದಲ್ಲಿ ಆಯೋಜಿಸಿದ ‘ದರ್ಪಣ- 2022’, ಕವಿವಿ ಕೌಸಾಳಿ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಚಟುವಟಿಕೆಯಿಂದ ಜೀವನದ ಅಂತ್ಯದ ವರಗೆ ಜೀವನವನ್ನು ಪ್ರೀತಿಯಿಂದ ಅನುಭವಿಸಬೇಕು, ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸಮರ್ಪಕವಾಗಿ ಯೋಚಿಸಿ ಕೈಗೊಳ್ಳಬೇಕು, ಸಾಧನೆಗೆ ನಮ್ಮ ದೈಹಿಕ ಮಾನಸಿಕ ಆರೋಗ್ಯ ಹೆಚ್ಚು ಮಹತ್ವ ನೀಡಬೇಕು ಎಂದ ಅವರು ಒಳ್ಳೆಯ ಸ್ನೇಹಿತರು ನಮ್ಮ ಸುತ್ತ ಇರುವಂತೆ ನೋಡಿಕೊಳ್ಳುವದರ ಜೊತೆಗೆ, ಪರಿಸರದ ಜೊತೆಗೆ ಭಾಂದವ್ಯ ಹೊಂದಿರುಬೇಕು, ಶಿಕ್ಷಕರನ್ನು ಗುರುಗಳನ್ನು ಸ್ಮರಿಸುವಂತಹ ಆದರ್ಶಗಳು ಜೀವನಕ್ಕೆ ಸಾಧನೆಗೆ ಉತ್ತೇಜನ ದೊರಕುತ್ತದೆ ಎಂದ ಅವರು ಸದಭಿರುಚಿಯ ಪ್ರವೃತ್ತಿಗಳನ್ನು ಹವ್ಯಾಸಗಳನ್ನು ಬೆಳಸಿಕೊಳ್ಳಬೇಕು. ಜೀವನದಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು ಅದನ್ನು ಸಾಧಿಸಲು ನಿರಂತರವಾಗಿ ಪರಿಶ್ರಮ ಪಡಬೇಕು ಎಂದ ಅವರು ಜೀವ ಇರೊವರಗೆ ಸಮಾಜಕ್ಕೆ ಋಣಿಯಾಗಿ ಸಮಾಜದ ಋಣವನ್ನು ತಿರಿಸಬೇಕು ಎಂದರು.
ಬಳ್ಳಾರಿ ಶ್ರೀಕೃಷ್ಣ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಎಸ್.ಸುಭಾಷ್ ಮಾತನಾಡಿ ವಿಶ್ವವಿದ್ಯಾಲಯಗಳು ಹಳೆಯ ವಿದ್ಯಾರ್ಥಿ ಸಂಘಗಳನ್ನು ಶೈಕ್ಷಣಿಕ ಬೆಳವಣಿಗೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದ ಅವರು ದೇಶದ ಆರ್ಥಿಕ ಬೇಳವಣಿಗೆಯಲ್ಲಿ ಶಿಕ್ಷಣ ಬಹು ಮುಖ್ಯವಾಗಿದೆ ಎಂದ ಅವರು ಶಿಕ್ಷಣ ಕ್ಷೇತ್ರದಿಂದ ದೇಶದ ಬೆಳವಣಿಗೆ ದರಕ್ಕೆ ಪೂರಕವಾಗಿ ಕೊಡುಗೆಯನ್ನು ನೀಡಬೇಕಾಗಿದ್ದು ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಕೇಂದ್ರಗಳ ಅವಶ್ಯಕತೆ ಇದೆ ಎಂದ ಅವರು ಕವಿವಿ ಕೌಸಾಳಿ ಅಧ್ಯಯನ ಕೇಂದ್ರದ ಬೆಳವಣಿಗೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಪಾತ್ರ ಬಹಳ ಮಹತ್ವದ ಪಾತ್ರ ವಹಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ ಮುಂಬರುವ ದಿನಗಳಲ್ಲಿ ಎಲ್ಲಾ ವಿಭಾಗ ಮತ್ತು ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘ ಬಲಪಡಿಸಲು ಕ್ರಮ ಕೈಗೊಳ್ಳಲಾಗುವದು. ಕವಿವಿ ಕೌಸಾಳಿ ಅಧ್ಯಯನ ಸಂಸ್ಥೆಗೆ ಸುಸಜ್ಜಿತ ಹೊಸ ಕಟ್ಟಡ ನಿರ್ಮಾಣ ಮಾಡುವದಾಗಿ ಹೇಳಿದ ಅವರು ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ವೃತ್ತಿಪರ ಜೀವನದಲ್ಲಿ ಕೌಶಲ್ಯಗಳನ್ನು, ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು ಸಮಾಜಮುಖಿಯಾಗಿ ಕೆಲಸ ಮಾಡಿದಾಗ ಸತ್ತ ನಂತರ ನಾವು ಬದಕು ಇನ್ನೊಬ್ಬರ ನೆನಪಿನಲ್ಲಿ ಉಳಿಯಲು ಸಾಧ್ಯ ಎಂದ ಅವರು, ಕವಿವಿ ಕೌಸಾಳಿ ಅಧ್ಯಯನ ವಿಭಾಗದ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ಪ್ರಸ್ತುತ ಕಿಮ್ಸ್ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕೌಸಾಳಿ ಅಧ್ಯಯನ ಸಂಸ್ಥೆಯ ಡೀನ್ ಡಾ.ರಮೇಶ್ ಕುಲಕರ್ಣಿ, ಕೌಸಾಳಿ ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರೇಶ್ ಶಾ, ಕೌಸಾಳಿ ಅಧ್ಯಯನದ ನಿರ್ದೇಶಕ ಡಾ.ಎ.ಎಮ್. ಕಡಕೋಳ, ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಪ್ಪ, ಡಾ.ಉತ್ತಮ ಕಿನಂಗೆ, ಡಾ.ರಾಮಾಂಜನಯಲು, ಡಾ.ಪುಷ್ಪಾ ಹೊಂಗಲ್, ಅಖಿಲ್ ಜೋಶಿ, ಸೇರಿದಂತೆ ಅನೇಕ ಕೌಸಾಳಿ ಅಧ್ಯಯನ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.