ಹೊಸಪೇಟೆ ನಗರದಲ್ಲಿ ನೂತನ ಕುಶಾಲ್ ಫ್ಯಾಷನ್ ಜ್ಯುವೆಲರಿ ಮೊದಲ ಮಳಿಗೆ ಉದ್ಘಾಟನೆ!

ಹುಬ್ಬಳ್ಳಿ: ಪ್ರಮುಖ ಫ್ಯಾಷನ್ ಮತ್ತು ಬೆಳ್ಳಿ ಆಭರಣಗಳ ಬ್ರಾಂಡ್ ಆಗಿರುವ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಮಳಿಗೆ ಮೊಟ್ಟಮೊದಲ ಬಾರಿಗೆ ಹೊಸಪೇಟೆ ನಗರದ ಇಕ್ಬಾಲ್ ಹಾಸ್ಪಿಟಲ್ ಹಿಂದುಗಡೆಯ ಕಾಲೇಜು ರಸ್ತೆಯಲ್ಲಿ ಆರಂಭವಾಗಿದೆ. ಈ ಮಳಿಗೆ ಉದ್ಘಾಟನೆಯನ್ನು ವಿಜಯನಗರದ ಶಾಸಕ ಹೆಚ್.ಆರ್.ಗವಿಯಪ್ಪ ನೆರವೇರಿಸಿದರು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಡಾ.ನರೇಂದ್ರಕುಮಾರ ಬಲ್ಡೋಟಾ, ಸೌಥ್ ವೆಸ್ಟರ್ನ್ ರೈಲ್ವೆ ZRUCC ಯ ಸದಸ್ಯರಾದ ಬಾಬುಲಾಲ್ ಜೈನ್, ಕುಶಾಲ್ ಜ್ಯುವೇಲರಿ ಶಾಪ್ ನ ಎಂಡಿ ತನ್ಷುಕ್ ರಾಜ್ ಬುಲೇಚಾ, ಮಾರ್ಕೆಟಿಂಗ್ ಮ್ಯಾನೇಜರ್
ಅಂಕಿತ್ ಬುಲೇಚ್ಚಾ,ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕುಶಾಲ್ಸ್ ಫ್ಯಾಷನ್ ಜ್ಯುವೆಲರಿಯಲ್ಲಿ ಕೆಲಸದ ಉಡುಪು, ಪಾರ್ಟಿವೇರ್, ವಧುವಿನ ಉಡುಪು, ದೈನಂದಿನ ಉಡುಪು ಹಾಗೂ ಮಹಿಳೆಯರ ಜೀವನದ ವಿವಿಧ ಅಂಶಗಳನ್ನು ಪೂರೈಸಲು ಫ್ಯಾಷನ್ ಮತ್ತು ಬೆಳ್ಳಿ,ಈಗಾಗಲೇ ಸಂಸ್ಥೆಯ ಮಳಿಗೆಗಳು ಬೆಂಗಳೂರು, ಹೈದರಾಬಾದ್, ಚೆನೈ, ಪುಣೆ, ಚಂಡೀಗಡ, ಇಂದೋರ್ ಹೀಗೆ ವಿವಿಧ ಪ್ರಮುಖ ನಗರದಲ್ಲಿವೆ.
ಹೊಸಪೇಟೆಯಲ್ಲಿನ ಮಳಿಗೆಯು 1300 ಚದರ ಅಡಿ ವಿಸ್ತೀರ್ಣದಲ್ಲಿದ್ದು, ಫ್ಯಾಷನ್ ಉತ್ಸಾಹಿಗಳಿಗೆ ಸ್ವರ್ಗವಾಗಿದೆ. ಮದುವೆ ಸಮಾರಂಭ, ಗೃಹ ಪ್ರವೇಶ, ಉದ್ಯೋಗ ಉಡುಪು, ದಿನನಿತ್ಯ ಧರಿಸುವ ಉಡುಪು ಸೇರಿದಂತೆ ಇನ್ನಿತರ ವಿಶೇಷ ಕಾರ್ಯಕ್ರಮಗಳಿಗೆ ಉಪಯೋಗವಾಗುವ ಎಲ್ಲ ರೀತಿಯ ಜಿರ್ಕಾನ್, ಸ್ಟರ್ಲಿಂಗ್ ಬೆಳ್ಳಿ ಆಭರಣಗಳು 5000 ಕ್ಕೂ ಹೆಚ್ಚು ವಿನ್ಯಾಸಗಳು
ದೊರೆಯಲಿದೆ. ಮಳಿಗೆಯಲ್ಲಿ ಬ್ರ್ಯಾಂಡ್ ನೆಕಲೇಸ್’ಗಳು, ಕಿವಿಯೋಲೆ, ಬೆರಳಿನ ಉಂಗುರ, ಬಳೆಗಳು ಸೇರಿದಂತೆ ತರವೆವಾರಿ ಆಭರಣಗಳಿವೆ.ಮಳಿಗೆ ಕುರಿತು ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ ಮಾರ್ಕೆಟಿಂಗ್ ನಿರ್ದೇಶಕರಾದ ಅಂಕಿತ ಗುಲೇಚಾ ಮಾತನಾಡಿ, ನಮ್ಮ ಗ್ರಾಹಕರು ವಿಶಿಷ್ಟ ಶೈಲಿಯ ಅನುಭವ ಪಡೆಯಲು ಮಳಿಗೆಯಲ್ಲಿ ವೈವಿಧ್ಯಮಯ ಆಭರಣಗಳನ್ನು ಒದಗಿಸುತ್ತಿದೆ. ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರುವಾಸಿಯಾಗಿರುವ ಹೊಸಪೇಟೆಗೆ ನಮ್ಮ ಬ್ರ್ಯಾಂಡ್ ಒದಗಿಸಲು ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕುಶಾಲ್ಸ್ ಫ್ಯಾಷನ್ ಜ್ಯುವೆಲರಿ 35 ನಗರಗಳಲ್ಲಿದ್ದು, 98 ಕ್ಕೂ ಹೆಚ್ಚು ಮಳಿಗೆಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧೆಡೆ 300 ಕ್ಕೂ ಹೆಚ್ಚು ಮಳಿಗೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ಎಂ ಡಿ ತನ್ಷುಕ್ ರಾಜ್ ಬುಲೇಚ್ಚಾ ಹೇಳಿದರು.
ಇದಲ್ಲದೇ ಗ್ರಾಹಕರಿಗೆ ಮನೆಯಿಂದಲೇ ಆಭರಣ ಖರೀದಿಗೆ ಅನುಕೂಲವಾಗಲೆಂದು www.kushals.com ವೆಬ್ ಸೈಟ್ ಮತ್ತು ಅಪ್ಲಿಕೇಶನ್ ಮೂಲಕವೂ ಖರೀದಿಗೆ ಅನುಕೂಲ ಮಾಡಿಕೊಡಲಾಗಿದೆ.