Top NewsUncategorizedಜಿಲ್ಲೆರಾಜಕೀಯರಾಜ್ಯ
Trending

ಪೋಲಿಸ್ ಅಧಿಕಾರಿಯ ಮೇಲೆ ಜೋಶಿ ಅವಾಜ್ : ಲೋಕಸಭಾ ಚುನಾವಣೆ ಗಿಮಿಕ್, ರಜತ್

ಹುಬ್ಬಳ್ಳಿ: ಸಾರ್ವಜನಿಕ ಹಿತ ರಕ್ಷಣೆಗೆ ತಮ್ಮ ಜೀವ ಮತ್ತು ಜೀವನವನ್ನು ಮುಡುಪಾಗಿಟ್ಟ ಪೊಲೀಸರು ಹಬ್ಬ ಹರಿದಿನ ಎನ್ನದೆ ಕರ್ತವ್ಯ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಗೌರವ ನೀಡುವುದು ಜನಪ್ರತಿನಿಧಿಗಳ ಮೊದಲ ಕರ್ತವ್ಯ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹಗಲಿರುಳು ಶ್ರಮ ವಹಿಸುವ ಸಂದರ್ಭದಲ್ಲಿ, ದೀಪಾವಳಿ ಹಬ್ಬದ ಶುಭಾಶಯ ಕೋರಲು ಬಂದ ಇನ್ಸಪೆಕ್ಟರ್ ಕಾಡದೇವರಮಠ ಅವರನ್ನು ತಮ್ಮ ಕಾರ್ಯಕರ್ತರ ಮುಂದೆ ಅವಮಾನಿಸಿ ಬೆದರಿಕೆ ಒಡ್ಡಿದ ರೀತಿ ಖಂಡನೀಯ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೊಲೀಸರು ತಪ್ಪು ಮಾಡಿದ್ದಲ್ಲಿ ಕಾನೂನು ರೀತಿ ಕೈಗೊಳ್ಳಬಹುದು ಅದನ್ನು ಬಿಟ್ಟು ರಾಜಕೀಯ ಬೆಳೆ ಬೇಯಿಸಿಕೊಂಡು ತಮ್ಮ ಹೆಸರು ಮಾಡಲು ಅಧಿಕಾರಿಗಳನ್ನು ಅವಮಾನಿಸುವುದು ತಪ್ಪು ಎಂದು ಕಿಡಿಕಾರಿದ್ದಾರೆ.

ಮುಂದೆ ಲೋಕಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವರು ಈ ರೀತಿಯ ಗಿಮಿಕ್ ಮಾಡಲು ಮುಂದಾಗಿದ್ದು, ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ರಜತ್ ಉಳ್ಳಾಗಡ್ಡಿ ಮಠ ಒತ್ತಾಯಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button