ಜಾತ್ರೆಯ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶ ಓರ್ವ ಸಾವು, ಇನ್ನೊರ್ವ ಸಾವು ಬದುಕಿನ ಮಧ್ಯೆ ಹೋರಾಟ….!!
ಶಿಗ್ಗಾಂವಿ: ಜಾತ್ರಾ ಮಹೋತ್ಸವದ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶಿಸಿ ಓರ್ವ ಮೃತ ಪಟ್ಟು, ಇನ್ನೋರ್ವ ತೀವ್ರಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಶಿಗ್ಗಾಂವ್ ತಾಲೂಕಿನ ಕ್ಯಾಲಕೊಂಡ ಗ್ರಾಮದಲ್ಲಿ ಶನಿವಾರ ನಡೆದಿದೆ.
ಹರೀಶ್ ಮಹೇಶ ಕಮ್ಮಾರ (18) ಮೃತಪಟ್ಟ ಬಾಲಕನಾಗಿದ್ದು, ಇನ್ನೊರ್ವ ಮಹಮ್ಮದ್ ಕೈಪ್ ಇಂತಿಯಾಜ್ ಮುಲ್ಲಾ (18) ತೀವ್ರವಾಗಿ ಗಾಯಗೊಂಡಿದ್ದಾನೆ. ಇವರಿಬ್ಬರೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಊರಲ್ಲಿ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಶನಿವಾರ 35 ಅಡಿಯ ಬ್ಯಾನರ್ ಅನ್ನು ಸಿದ್ದಪಡಿಸಿ ಮೊಬೈಲ್ ಟವರ್ ಕಂಬಕ್ಕೆ ಕಟ್ಟಲು ಮುಂದಾಗಿದ್ದಾರೆ. ಈ ವೇಳೆ ರಭಸದಿಂದ ಬಂದ ಗಾಳಿಗೆ ಬ್ಯಾನರ್ ಕೈತಪ್ಪಿ ವಿದ್ಯುತ್ ತಂತಿಯ ಮೇಲೆ ಬಿದಿದ್ದೆ. ಇದನ್ನು ಗಮನಿಸದ ಯುವಕರು ಬ್ಯಾನರ್ ತೆಗೆಯಲು ಮುಂದಾಗಿದ್ದಾರೆ. ಪರಿಣಾಮ ಇಬ್ಬರಿಗೂ ವಿದ್ಯುತ್ ಸ್ಪರ್ಶಗೊಂಡಿದೆ. ಕೂಡಲೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇಬ್ಬರನ್ನೂ ಸ್ಥಳೀಯ ಶಿಗ್ಗಾಂವ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು ಕೂಡಾ ಹರೀಶ್ ಮೃತಪಟ್ಟಿದ್ದಾನೆ. ಇನ್ನೊರ್ವನಿಗೆ ಚಿಕಿತ್ಸೆ ನೀಡಲಾಗುತ್ತಿದೆ.