Top NewsUncategorizedಅಪರಾಧಜಿಲ್ಲೆ
ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬಂದಿದ್ದ ಯುವಕ ಕರೆಂಟ್ ಶಾಕ್ ನಿಂದ ದುರ್ಮರಣ…!
ಹುಬ್ಬಳ್ಳಿ: ವಿದ್ಯುತ್ ತಗುಲಿ ಯುವಕನೊರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ಇನಾಂ ವೀರಾಪುರದಲ್ಲಿ ಇಂದು (ಮಾ.22) ಬೆಳಿಗ್ಗೆ ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರ ನಿವಾಸಿ ಮಲ್ಲಿಕ್ ಜಾನ್ ಜಾಫರ್ ಚೋಪದಾರ (18) ಮೃತ ದುರ್ದೈವಿಯಾಗಿದ್ದು, ಗೌಂಡಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತ ಕೆಲಸಕ್ಕೆಂದು ದಿನನಿತ್ಯದಂತೆ ಬಂದಾಗ ಇನಾಂ ವೀರಾಪುರದಲ್ಲಿ ಮನೆ ಕೆಲಸ ಮಾಡುತ್ತಿರುವ ವೇಳೆ ವಿದ್ಯುತ್ ಸ್ಪರ್ಶಗೊಂಡಿದೆ. ಕೂಡಲೇ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1