ಹುಬ್ಬಳ್ಳಿ: ಆರ್.ಎಂ.ಪಿ ವೈದ್ಯನಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜಿಲ್ಲಾ ಆಯುಷ ಅಧಿಕಾರಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದಿದ್ದಾನೆ.
ಆರ್.ಜಿ.ಮೇತ್ರಿಯೇ ಎಸಿಬಿ ಬಲೆ ಬಿದ್ದಿರುವ ಭ್ರಷ್ಟ ಅಧಿಕಾರಿಯಾಗಿದ್ದಾರೆ. ಅಣ್ಣಿಗೇರಿಯ ಹರಿಶ್ಚಂದ್ರ ನಾರಾಯಣಪೂರ ಅವರು, ಆರ್.ಎಂ.ಪಿ ಕ್ಲಿನಿಕ್ ನಡೆಸುತ್ತಿದ್ದು, ಕ್ಲಿನಿಕ್ ಯಾವುದೇ ತೊಂದರೆ ಇಲ್ಲದಂತೆ ನಡೆಸಿಕೊಂಡು ಹೋಗಲು ಆರೋಪಿತ ಅಧಿಕಾರಿ ಮೇತ್ರಿ ಅವರು, ತಮಗೆ ಮತ್ತು ಡಿಎಚ್ಒ ಅವರಿಗೆ ಸೇರಿ 2 ಲಕ್ಷ ಲಂಚದ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದು, ಲಂಚದ ಮುಂಗಡ ಹಣ 10,000 ರೂಪಾಯಿ ಲಂಚದ ಹಣವನ್ನು ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಳಗಾವಿ ಎಸಿಬಿ ಉತ್ತರ ವಲಯದ ಪೊಲೀಸ್ ಅಧೀಕ್ಷಕರಾದ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಭ್ರಷ್ಟ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆದಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1