ಅಪರಾಧ
ಮುಂಡಗೋಡ ಗಡಿಭಾಗದಲ್ಲಿ ಭೀಕರ ಅಪಘಾತ – ಡಿಕ್ಕಿಯ ರಭಸಕ್ಕೆ ಬೊಲೆರೋ ಪಲ್ಟಿ, ಕಾರು ಜಖಂ
ಮುಂಡಗೋಡ: ತಾಲೂಕಿನ ಗಡಿಭಾಗವಾದ ತಡಸದ ತಾಯವ್ವನ ದೇವಸ್ಥಾನ ಸಮೀಪ ಸ್ವಿಫ್ಟ್ ಕಾರು ಮತ್ತು ಬೊಲೆರೋ ಪಿಕ್‌ಅಪ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿ ಪ್ರಕಾರ, ಮಾರುತಿ ಸ್ವಿಫ್ಟ್ ಕಾರು ಹಾಗೂ ಬೊಲೆರೋ ಪಿಕ್‌ಅಪ್ ವಾಹನ ಪರಸ್ಪರ ಎದುರುಮುಖವಾಗಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಬೊಲೆರೋ ಪಿಕ್‌ಅಪ್ ವಾಹನ ಪಲ್ಟಿಯಾಗಿದ್ದು, ಸ್ವಿಫ್ಟ್ ಕಾರಿನ ಮುಂಭಾಗ ಭಾಗಶಃ ಜಖಂಗೊಂಡಿದೆ.
ಘಟನೆಯ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ರಕ್ಷಣೆ ಕಾರ್ಯ ಕೈಗೊಂಡರು.
ಘಟನೆಯ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ವರದಿ ಶಶಿಕಾಂತ್ ಕೊರವರ
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1




