ಹಾವೇರಿ: ನಗರದ ಪ್ರತಿಷ್ಠಿತ ಶಾಲೆಯಾಗಿರುವ ಜೆ.ಪಿ.ರೋಟರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಶಾಲೆಯ 1991-2000 ಇಸ್ವಿಯ ಹಳೆಯ ವಿದ್ಯಾರ್ಥಿಗಳಿಂದ ಈ ವೊಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬಳಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದಳವಾಯಿ, ರಜಪೂತ, ನ್ಯಾಮತಿ, ಶೈಲಜಾ, ಲಲಿತ ಮರಡಿ, ಶಿಕ್ಷಕರಾದ ಕುಸುಮಾ ನಾಡಿಗೇರ, ಆಡೂರು, ಶೈಲಜಾ, ಪುರದ್, ಜಯಶ್ರೀ ಕುಲಕರ್ಣಿ, ಯಶೋಧಾ, ಪಾಟೀಲ್ ಸೇರಿದಂತೆ ಮುಂತಾದ ತಮ್ಮ ನೆಚ್ಚಿನ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸನ್ಮಾನಿಸಿ, ಸ್ಮರಣಿಕೆಯನ್ನು ನೀಡಿದರು.
ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಸನ್ಮಾನಿಸಿದ್ದು ಖುಷಿ ತಂದಿದೆ. ನಮ್ಮ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವಿಷಯ ಹೆಮ್ಮೆ ಎನಿಸುತ್ತದೆ. ಗುರು ಶಿಷ್ಯರ ಸಂಬಂಧ ಅವಿನಾಭಾವ ಸಂಬಂಧ. ಇದೇ ರೀತಿಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ಸಂಪರ್ಕದಲ್ಲಿದ್ದು, ಸಂಬಂಧವನ್ನು ಇಟ್ಟುಕೊಂಡು ಹೋಗಬೇಕು ಎಂದರು.
ಬಳಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.
ಈ ಕಾರ್ಯಕ್ರಮವನ್ನು ಬಸವರಾಜ ಕರಬನ್ನವರ, ಸಿದ್ದು, ಸುರಪುರಮಠ, ಮಧುವತಿ ಮುದ್ದಿ, ಜಾವೀದ್ ದೇವಿ ಹೊಸೂರ, ಕಿರಣ ಮತ್ತೆಹಳ್ಳಿ, ಭಾರತಿ ಹೊಸಮನಿ, ಅಶೋಕ ನಂದಿ ಅಚ್ಚುಕಟ್ಟಾಗಿ ಆಯೋಜಿಸಿದರು. 1991-2000 ರವರೆಗಿನ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ವಧುಮತಿ ಮುದ್ದಿ, ಭಾರತಿ ಹೊಸಮನಿ, ಬಸವರಾಜ ಕರಬಣ್ಣನವರ ನಡೆಸಿದರು.