ಜಿಲ್ಲೆಸ್ಪೋರ್ಟ್ಸ್

ಶ್ರೀ ಗಜಾನನ ಟ್ರೋಫಿ ಸೀಸನ್-2: ಮುಂಡಗೋಡದ ಶಿವಶಕ್ತಿ ತಂಡಕ್ಕೆ ಭರ್ಜರಿ ಜಯ

ಶಿರಸಿ: ಶಿರಸಿಯಲ್ಲಿ ನಡೆದ ಪ್ರತಿಷ್ಠಿತ ಶ್ರೀ ಗಜಾನನ ಟ್ರೋಫಿ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಂಡಗೋಡದ ಶಿವಶಕ್ತಿ ತಂಡ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದೆ.

ಅಂತಿಮ ಪಂದ್ಯದಲ್ಲಿ ಶಿವಂ ಕ್ರಿಕೆಟರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 8 ಓವರ್‌ಗಳಲ್ಲಿ 70 ರನ್‌ಗಳನ್ನು ಕಲೆಹಾಕಿತು. 71 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶಿವಶಕ್ತಿ ತಂಡ 7 ಓವರ್‌ಗಳಲ್ಲಿ, ಇನ್ನೂ 6 ಬಾಲ್‌ಗಳು ಉಳಿದಿರುವಾಗಲೇ ಜಯ ಸಾಧಿಸಿ ಭರ್ಜರಿ ಪ್ರದರ್ಶನ ನೀಡಿತು.

ಶಿವಶಕ್ತಿ ತಂಡದ ಸಮೀರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ವಿಶ್ವನಾಥ್ ಶ್ರೇಷ್ಠ ಬೌಲಿಂಗ್ ಮೂಲಕ ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು.

ಈ ತಂಡದ ಮಾಲೀಕರಾದ ಮಂಜುನಾಥ್ ಕ್ಯಾಲಕೊಂಡ್ ಅವರ ಮಾರ್ಗದರ್ಶನದಲ್ಲಿ ಶಿವಶಕ್ತಿ ತಂಡ ಈ ಮಹತ್ವದ ಸಾಧನೆ ಮಾಡಿದೆ. ಪ್ರಥಮ ಬಹುಮಾನವಾಗಿ 1,55,555 ನಗದು ಬಹುಮಾನವನ್ನು ಪಡೆದು ತಂಡ ಸಂಭ್ರಮಿಸಿದೆ.

ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳು ಮತ್ತು ಕ್ರೀಡಾಭಿಮಾನಿಗಳ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಶಿವಶಕ್ತಿ ತಂಡದ ಈ ಸಾಧನೆಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ವರದಿ: ವೆಂಕಟೇಶ ದಾಸರ

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button