Uncategorizedಜಿಲ್ಲೆಸಂಸ್ಕೃತಿ

ಎಪಿಎಂಸಿಯಲ್ಲಿ ಅಯ್ಯಪ್ಪನಿಗೆ ಭಕ್ತಿಪೂಜೆ…!

ಹುಬ್ಬಳ್ಳಿ: ನಗರದ ಈಶ್ವರನಗರ ಎಪಿಎಂಸಿ ಬಡಾವಣೆ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ವತಿಯಿಂದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಅಯ್ಯಪ್ಪ ಸ್ವಾಮಿ ಮಹಾ ಪೂಜೆಯನ್ನು ಉಣಕಲ್ ನ ಗಜೇಂದ್ರ ಗುರುಸ್ವಾಮಿ ಅವರು ಮಹಾಪೂಜೆ ಮತ್ತು ಪಡಿಪೂಜೆ, ಹೋಮ, ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸುವ ಮೂಲಕ ಅಯ್ಯಪ್ಪ ಸ್ವಾಮಿಯ ಅನುಗ್ರಹವನ್ನು ಎಲ್ಲ ಭಕ್ತಾದಿಗಳಿಗೆ ಮತ್ತು ಮಾಲಾಧಾರಿಗಳಿಗೆ ಅನುಗ್ರಹಿಸಿದರು. ನಂತರ ಸೇರಿದ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಪುನೀತರಾದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರು , ರಾಜಣ್ಣ ಕೊರವಿ ,ಈಶ್ವರನಗರ ವಾರ್ಡ್ ಬಿಜೆಪಿ ಅಧ್ಯಕ್ಷ ಮುತ್ತು ಹೆಬ್ಬಳ್ಳಿ ಮತ್ತು ಬಡಾವಣೆಯ ಸುತ್ತಮುತ್ತಲಿನ ಭಕ್ತಾದಿಗಳು ಅಯ್ಯಪ್ಪ ಸ್ವಾಮಿ ಮಾಲದಾರಿಗಳಾದ ಕಿರಣ್ ಪೂಜಾರ್ , ಮಾರುತಿ , ಶರೀಫ್ , ಅಮರನಾಥ್ ಹರ್ಲಾಪುರ, ಆಕಾಶ್ ಹಾಗೂ ಈಶ್ವರನಗರ ಎಲ್ಲಾ ಭಕ್ತಾದಿಗಳು ಭಾಗವಹಿಸಿದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button