ಸಮಾಜ ಸೇವಕ ಗಂಗನಗೌಡ ನರಗುಂದ ಅವರಿಗೆ ಯುವ ನಾಯಕ ಪುರಸ್ಕಾರ

ಹುಬ್ಬಳ್ಳಿ: ಸಾಹಿತ್ಯ, ಭಾಷೆ, ನೆಲ–ಜಲ, ಸಂಸ್ಕೃತಿ, ಸಂಗೀತ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸಮಾಜ ಸೇವಕ ಗಂಗನಗೌಡ ನರಗುಂದ ಅವರನ್ನು ಯುವ ನಾಯಕ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
Light of Human Life ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ), ನಾಗರಮುನ್ನೋಳಿ ಸಂಸ್ಥೆಯ ಸಂಚಾಲಕ ಮಂಡಳಿಯು ಅವರ ಸಮಾಜಮುಖಿ ಸೇವೆ, ಸಾಧನೆ, ಜ್ಞಾನ ಹಾಗೂ ಮಾನವೀಯ ಪ್ರೀತಿಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಪುರಸ್ಕಾರ ಪ್ರದಾನ ಸಮಾರಂಭವು ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ಜನವರಿ 25ರಂದು ಆಯೋಜಿಸಲಾಗುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಲಿದ್ದು, ಅಧಿಕೃತವಾಗಿ ಪುರಸ್ಕಾರವನ್ನು ದಿನಾಂಕ 25 ಜನವರಿ 2026ರಂದು ಗೌರವಪೂರ್ವಕವಾಗಿ ಪ್ರದಾನ ಮಾಡಲಾಗುವುದು ಎಂದು ಫೌಂಡೇಶನ್ ಅಧ್ಯಕ್ಷರಾದ ಶ್ರೀ ಲಾಲಸಾಬ ಎಚ್. ಪೆಂಡಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪುರಸ್ಕೃತರು ಸಮಾರಂಭದಲ್ಲಿ ಭಾಗವಹಿಸಿ ಗೌರವ ಸ್ವೀಕರಿಸಬೇಕಾಗಿ ಸಂಸ್ಥೆ ಮನವಿ ಮಾಡಿದೆ.




